ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

BiggBoss Kannada OTTಗೆ ಚಾಲನೆ: 16 ಸ್ಪರ್ಧಿಗಳ ಪೂರ್ಣ ಮಾಹಿತಿ ಇಲ್ಲಿದೆ

Last Updated 7 ಆಗಸ್ಟ್ 2022, 11:18 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ದೊಡ್ಡ ಮನೆಯಲ್ಲಿ 16 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಬಿಗ್‌ಬಾಸ್ ಒಟಿಟಿ ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ...

1) ಆರ್ಯವರ್ಧನ್ ಗುರೂಜಿ

ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿಜ್ಯೋತಿಷಿಯಾಗಿಬಿಗ್‌ಬಾಸ್ ಒಟಿಟಿ ಕನ್ನಡ ಸೀಸನ್ 1ರ ಮೊದಲ ಸ್ಪರ್ಧಿಯಾಗಿ ದೊಡ್ಡ ಮನೆಗೆ ಹೋಗಿದ್ದಾರೆ. ಖಾಸಗಿ ಚಾನೆಲ್‌ಗಳಲ್ಲಿ ಭವಿಷ್ಯ ಹೇಳುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ವಿಶೇಷ ಎಂದರೆಕ್ರಿಕೆಟ್ ಪಂದ್ಯಗಳ ಕುರಿತು ಆರ್ಯವರ್ಧನ್ ಭವಿಷ್ಯ ಹೇಳುತ್ತಾರೆ. ಅವರ ಮಾತಿನ ಶೈಲಿ, ಬೈಯುವ ರೀತಿಯಿಂದಲೇ ಅವರು ಹೆಚ್ಚು ಗಮನ ಸೆಳೆದಿದ್ದಾರೆ.

2) ಸೋಶಿಯಲ್‌ ಮೀಡಿಯಾ ಸ್ಟಾರ್‌ ಸೋನು ಶ್ರೀನಿವಾಸ್ ಗೌಡ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವಸೋನು ಶ್ರೀನಿವಾಸ್ ಗೌಡ ಎರಡನೇಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಿಗ್‌ಬಾಸ್‌ ಮನೆ ಸೇರಿರುವುದಕ್ಕೆ ಕೆಲವರು ಟೀಕೆ ಮಾಡಿದ್ದಾರೆ. ಈ ಹಿಂದೆ ಸೋನು ಅವರ ಖಾಸಗಿ ಫೋಟೊಗಳು ವೈರಲ್‌ ಆಗಿದ್ದವು. ಇಂತಹವರು ಬಿಗ್‌ಬಾಸ್‌ ಮನೆಗೆ ಬೇಡ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಸೋನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿದ್ದಾರೆ.

3)ನಟ ರೂಪೇಶ್ ಶೆಟ್ಟಿ

ಕನ್ನಡದ ‘ಗಿರ್‌ಗಿಟ್' ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡಿರುವ ರೂಪೇಶ್ ಶೆಟ್ಟಿ ಬಿಗ್‌ಬಾಸ್ ಮನೆಯ ಮೂರನೇ ಸ್ಪರ್ಧಿ. ದಕ್ಷಿಣ ಕನ್ನಡದವರಾದ ಇವರು ಸಿನಿಮಾಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ. ಇವರು ರೆಡಿಯೊ ಜಾಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 32 ವರ್ಷದ ರೂಪೇಶ್‌ಗೆ ಇನ್ನೂ ವಿವಾಹವಾಗಿಲ್ಲ. ಈ ವಿಷಯವನ್ನು ಇಟ್ಟುಕೊಂಡು ನಟ ಕಿಚ್ಚ ಸುದೀಪ್,ರೂಪೇಶ್‌ ಅವರನ್ನು ಮನೆಯಲ್ಲಿ ಏನಾದರೂ ಮಾಡಬಹುದೇ ಎಂದು ಕಿಚಾಯಿಸಿದ್ದಾರೆ.

4) ನಟಿ ಸ್ಫೂರ್ತಿ ಗೌಡ

ಶಿವಮೊಗ್ಗದ ತಿರ್ಥಹಳ್ಳಿಹುಡುಗಿ ಸ್ಪೂರ್ತಿ ಗೌಡ ಬಿಗ್‌ಬಾಸ್ ಮನೆ ಸೇರಿದ್ದಾರೆ.. ಪ್ಯಾಟೆ ಹುಡ್ಗಿ ಹಳ್ಳಿಗೆ ಬಂದ್ರು ರಿಯಾಲಿಟಿ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.ಕೆಲವು ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ.

5) ನಟಿ ಸಾನ್ಯ ಅಯ್ಯರ್

ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ಸಾನ್ಯಾ ಐಯ್ಯರ್ ಐದನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಕವಯತ್ರಿ, ನೃತ್ಯಗಾರ್ತಿಯಾಗಿರುವ ಚಿಕ್ಕ ವಯಸ್ಸಿನಿಂದಲೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಕೌಟುಂಬಿಕ ವಿಚಾರದಲ್ಲಿ ಸಾಕಷ್ಟು ನೋವು ಅನುಭವಿಸಿರುವುದಾಗಿಯೂ ಸಾನ್ಯಾ ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೊಡಿಕೊಂಡಿದ್ದರು.

6) ಹಾಸ್ಯ ಕಲಾವಿದ ಲೋಕೇಶ್

ಹಾಸ್ಯ ಕಲಾವಿದ ಲೋಕೇಶ್‌ ಅವರು ದೊಡ್ಡ ಮನೆಗೆ ಪ್ರವೇಶ ಮಾಡಿದ್ದಾರೆ. ಕಷ್ಟಪಟ್ಟು ಮೇಲೆ ಬಂದಿರುವ ಅವರು ಚಿಕ್ಕ ವಯಸ್ಸಿಗೆ ಮನೆ ಬಿಟ್ಟು ಬಂದು, ಪೇಪರ್‌ ಹಾಯ್ದು, ಭಿಕ್ಷೆ ಬೇಡಿ ಜೀವನ ನಡೆಸಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಸೇರಿಕೊಂಡ ಬಳಿಕ ಅವರ ಬದುಕೇ ಬದಲಾಗಿ ಬಿಟ್ಟಿದೆ. ಟಿ.ವಿಗಳಲ್ಲಿ ಹಲವಾರು ಕಾಮಿಡಿ ಶೋಗಳಲ್ಲಿ ಲೋಕೇಶ್‌ ಕಾಣಿಸಿಕೊಂಡಿದ್ದಾರೆ.

7) ನಟಿ ಅಕ್ಷತಾ ಕುಕಿ

ಪಟ-ಪಟನೇ ಮಾತನಾಡುವ ಅಕ್ಷತಾ ಮೂಲತಃ ದಾಂಡೇಲಿಯವರು. ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆದಿರುವ ಅವರು ಯಾವ ರೀತಿ ಮನೆಯಲ್ಲಿ ಇರುತ್ತಾರೆ ಎಂಬುದನ್ನು ಕಾದುನೋಡಬೇಕು.

8) ನಟ ರಾಕೇಶ್ ಅಡಿಗ

ನಟ ರಾಕೇಶ್ ಅಡಿಗ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಕೇಶ್ ಈವರೆಗೆ 13 ಸಿನಿಮಾಗಳಲ್ಲಿ ನಟಿಸಿದ್ದಾರೆ.ಸಿನಿಮಾ ನಿರ್ದೇಶನವನ್ನೂ ಮಾಡಿರುವ ರಾಕೇಶ್ ಅಡಿಗ ಬಿಗ್‌ಬಾಸ್‌ ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ನೋಡಬೇಕು.

9) ರೂಪದರ್ಶಿ ಕಿರಣ್ ಕೆ ಯೋಗೇಶ್ವರ್

ರೂಪದರ್ಶಿಕಿರಣ್ ಯೋಗೇಶ್ವರಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದ ಯೋಗೇಶ್ವರಿ ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮಾಡಿಕೊಂಡು ರೂಪದರ್ಶಿಯಾಗಿದ್ದಾರೆ. ಅವರಿಗೆ ಪ್ರವಾಸ ಮಾಡುವುದು ತುಂಬಾ ಇಷ್ಟವಂತೆ. ಅವರು ಗಟ್ಟಿ ವ್ಯಕ್ತಿತ್ವದವರು ಎಂದು ಖ್ಯಾತರಾಗಿದ್ದಾರೆ.

10) ನಟಿ ಚೈತ್ರಾ ಹಳ್ಳಿಕೇರಿ

ನಟಿ ಚೈತ್ರಾ ಹಳ್ಳಿಕೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಚ್ಛೇದನದ ಬಳಿಕ ಅವರ ವೈವಾಹಿಕ ಜೀವನ ಸಾಕಷ್ಟು ಸುದ್ದಿಯಾಗಿತ್ತು. ಚೈತ್ರಾಗೆ ಇಬ್ಬರು ಮಕ್ಕಳು ಇದ್ದಾರೆ.

11) ನಟ ಉದಯ್ ಸೂರ್ಯ

ನಟ ಉದಯ್ ಸೂರ್ಯ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕನ್ನಡವನ್ನು ಚೆನ್ನಾಗಿ ಮಾತನಾಡುವ ಉದಯ್ ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಹಲವು ಸಲ ಬಿಗ್‌ಬಾಸ್ ಆಡಿಷನ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಲ ಅವರಿಗೆ ಅವಕಾಶ ಸಿಕ್ಕಿದೆ.

12) ಉದ್ಯಮಿಜಯಶ್ರೀ ಆರಾಧ್ಯ

ಬೆಂಗಳೂರಿನ ಮಾಜಿ ಡಾನ್, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ದೊಡ್ಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾಸ್ಮೆಟಿಕ್ ಉದ್ಯಮ ನಡೆಸುತ್ತಿರುವ ಅವರು ಬೆಂಗಳೂರಿನಲ್ಲಿ ಮೂರು ಬ್ರ್ಯಾಂಚ್‌ಗಳನ್ನು ಹೊಂದಿದ್ದಾರೆ. ಸದ್ಯ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.

13) ನಟ, ರಾಜಕಾರಣಿಅರ್ಜುನ್ ರಮೇಶ್

ನಟ, ರಾಜಕಾರಣಿ ಎರಡೂ ಆಗಿರುವ ಅರ್ಜುನ್ ರಮೇಶ್ ಬಿಗ್‌ಬಾಸ್‌ ಮನೆ ಪ್ರವೇಶ ಮಾಡಿದ್ದಾರೆ. ರಾಜಕೀಯ ಹಾಗೂ ನಟನೆಯಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ.

14 ಹಾಗೂ15) ಚಾರಣಿಗರುನಂದು ಮತ್ತುಜಶ್ವಂತ್

ಫುಟ್‌ಬಾಲ್ ಆಟಗಾರ್ತಿ ನಂದು ಹಾಗೂ ರೂಪದರ್ಶಿ ಜಸ್ವಂತ್ ಜೋಡಿ ಒಟ್ಟಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ನಂದು ಹಾಗೂ ಜಸ್ವಂತ್ ಚಾರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಹಿಂದೆ ಎಂಟಿವಿ ರೋಡೀಸ್‌ನಲ್ಲಿ ಇಬ್ಬರು ಭಾಗವಹಿಸಿದ್ದರು.

16) ಪತ್ರಕರ್ತ ಸೋಮಣ್ಣ ಮಾಚಿಮಾಡ

ಪತ್ರಕರ್ತ ಸೋಮಣ್ಣ ಮಾಚಿಮಾಡ ಕೂಡ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ವಿವಿಧ ಸುದ್ದಿ ವಾಹಿನಿಗಳಲ್ಲಿ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಿರೂಪಕರಾಗಿಯೂ ಅವರು ಗಮನ ಸಳೆದಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT