ಗುರುವಾರ , ಆಗಸ್ಟ್ 5, 2021
21 °C

'ಜಸ್ಟ್ ಎ ಫ್ರೆಂಡ್' ಖ್ಯಾತಿಯ ಅಮೆರಿಕದ ರ್‍ಯಾಪರ್‌ ಬಿಜ್‌ ಮಾರ್ಕಿ ನಿಧನ

ಎಎಫ್‌‍ಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕದ ಖ್ಯಾತ ರ್‍ಯಾಪರ್‌, ಡಿಜೆ ಹಾಗೂ ಆಲ್ಬಂ ಹಾಡುಗಳು ನಿರ್ಮಾಪಕ ಬಿಜ್‌ ಮಾರ್ಕಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಶುಕ್ರವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಿಧನರಾದರು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

90ರ ದಶಕದಲ್ಲಿ 'ಜಸ್ಟ್ ಎ ಫ್ರೆಂಡ್' ರ್‍ಯಾಪ್‌ ಹಾಡಿನ ಮೂಲಕ ಬಿಜ್‌ ಖ್ಯಾತಿಗಳಿಸಿದ್ದರು. ನೂರಾರು ಹಿಪ್‌ ಹಾಪ್‌ ಹಾಗೂ ರ್‍ಯಾಪ್‌ ಹಾಡುಗಳಿಗೆ ಬಿಜ್‌ ದನಿಯಾಗಿದ್ದರು. ಹಲವು ವಿಡಿಯೊ ಸಾಂಗ್‌ಗಳನ್ನು ನಿರ್ಮಾಣ ಮಾಡಿದ್ದರು.

ಬಿಜ್‌ ಅವರ ಮೂಲ ಹೆಸರು ಮಾರ್ಸೆಲ್ ಹಾಲ್. ಅವರು ಸಂಗೀತ ಕ್ಷೇತ್ರಕ್ಕೆ ಬಂದ ಮೇಲೆ ಬಿಜ್‌ ಮಾರ್ಕಿ ಎಂದು ಹೆಸರು ಬದಲಿಸಿಕೊಂಡಿದ್ದರು.  

‘ಪಿಕಿನ್', ‘ಬೂಗರ್ಸ್‌‘ ಮತ್ತು ‘ಚೈನೀಸ್ ಫುಡ್‘ ಅವರ ಜನಪ್ರಿಯ ರ್‍ಯಾಪ್‌ ಹಾಡುಗಳು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು