ಬುಧವಾರ, ಡಿಸೆಂಬರ್ 2, 2020
25 °C

ಜೀ 5 ನಲ್ಲಿ ‘ಡಾರ್ಕ್ 7 ವೈಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾರ್ಕ್ 7 ವೈಟ್‌

ರಾಜಕೀಯ ಕಥಾಹಿನ್ನೆಲೆಯುಳ್ಳ ಹಿಂದಿ ವೆಬ್‌ಸರಣಿ ‘ಡಾರ್ಕ್ 7 ವೈಟ್‌’. ಇದು ನವೆಂಬರ್ 24ಕ್ಕೆ ಜೀ 5 ನಲ್ಲಿ ಬಿಡುಗಡೆಯಾಗಲಿದೆ. ಈ ವೆಬ್‌ಸರಣಿಗೆ ಸಾತ್ವಿಕ್ ಮೊಹಾಂತೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಯುವ ರಾಜಕಾರಣಿ ಯುಡಿ ಹಾಡಹಗಲಿನಲ್ಲೇ ಕೊಲೆಯಾಗುತ್ತಾನೆ. ಅವರ ಹತ್ತಿರದ ಸ್ನೇಹಿತರು ಕೊಲೆಗೆ ಸಂಬಂಧಿಸಿ ಪ್ರಧಾನ ಶಂಕಿತರಾಗುತ್ತಾರೆ. ಈ ಕೊಲೆಯ ರಹಸ್ಯದ ಹಿಂದೆ ಅನೇಕ ಕರಾಳ ರಹಸ್ಯಗಳು ಬಿಚ್ಚಿಕೊಳ್ಳುತ್ತವೆ. ಕೊನೆಗೆ ಯುಡಿಯನ್ನು ಕೊಲೆ ಮಾಡಿದ್ದು ಯಾರು, ಉಳಿದ ರಹಸ್ಯಗಳೇನು ಎಂದು ತಿಳಿಯಬೇಕಾದರೆ ವೆಬ್‌ಸರಣಿಯನ್ನು ವೀಕ್ಷಿಸಬೇಕು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಸುಮಿತ್ ವ್ಯಾಸ್, ನಿಧಿ ಸಿಂಗ್‌, ಜತಿನ್ ಸರ್ನಾ ಹಾಗೂ ಅಬಿಗಲಿ ಪಾಂಡೆ ಮುಂತಾದವರು ಈ ವೆಬ್‌ಸರಣಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಮಿಸ್‌ಮ್ಯಾಚ್ಡ್‌

ಆಕಾಶ್ ಖುರಾನ ನಿರ್ದೇಶನದ ಹಿಂದಿ ವೆಬ್‌ಸರಣಿ ‘ಮಿಸ್‌ಮ್ಯಾಚ್ಡ್‌’. ರೊಮ್ಯಾಂಟಿಕ್ ಕಥಾ ಹಿನ್ನೆಲೆಯುಳ್ಳ ಈ ಸರಣಿಯು ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಡಿಂಪಲ್ ಹಾಗೂ ರಿಷಿ ಎಂಬ ಜೋಡಿಗಳ ನಡುವೆ ನಡೆಯುವ ಕಥೆ ಮಿಸ್‌ಮ್ಯಾಚ್ಡ್‌. ರೊಮ್ಯಾಂಟಿಕ್ ಹಿನ್ನೆಲೆಯುಳ್ಳ ಈ ಕತೆಯಲ್ಲಿ ಟೆಕಿ ಹುಡುಗಿಯನ್ನು ಪ್ರೀತಿಸುವ ಹುಡುಗ ರಿಷಿ. ಆದರೆ ಡಿಂಪಲ್‌ಗೆ ರಿಷಿ ತನಗೆ ಹೊಂದುವ ಜೋಡಿಯಲ್ಲ ಎಂಬ ಮನೋಭಾವ. ಒಬ್ಬರಿಗೊಬ್ಬರು ಹೊಂದಾಣಿಕೆಯಾಗದ ಜೋಡಿಯ ಕಥೆ ಈ ವೆಬ್‌ಸರಣಿಯದ್ದು.

ಈ ವೆಬ್‌ಸರಣಿಯಲ್ಲಿ ಪ್ರಜಕ್ತಾ ಕೊಹ್ಲಿ ಡಿಂಪಲ್ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಪಾತ್ರಕ್ಕೆ ರೋಹಿತ್ ಸರಫ್ ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು