ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದ್ದಾರೆ ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನೇ ಹೋಲುವ ಯುವತಿ!

ದೀಪಿಕಾ ಪಡುಕೋಣೆಯಂತೆಯೇ ಕಾಣಿಸುವ ಯುವತಿ ಇಂಟರ್‌ನೆಟ್‌ನಲ್ಲಿ ವೈರಲ್
ಅಕ್ಷರ ಗಾತ್ರ

ಬೆಂಗಳೂರು: ಒಬ್ಬರಂತೆ ಲೋಕದಲ್ಲಿ ಏಳು ಮಂದಿ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮುಖಭಾವ ಇದ್ದರಂತೂ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ.

ಚಲನಚಿತ್ರ ನಟರು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳ ತದ್ರೂಪಿಯಂತೆ ಕಾಣಿಸುವ ವ್ಯಕ್ತಿಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಾರೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲೂ ಹೀಗೆಯೇ ಆಗಿದೆ. ದೀಪಿಕಾ ಅವರಂತೆಯೇ ಕಾಣಿಸುವ ರಿಜುತಾ ಘೋಶ್ ದೇವ್ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ರಿಜುತಾ ನೋಡಲು ದೀಪಿಕಾ ಪಡುಕೋಣೆಯಂತೆ ಕಾಣಿಸುತ್ತಿದ್ದು, ಅವರ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ರಿಜುತಾ ಫೋಟೊಗಳಿಗೆ ಜನರು ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದು, ದೀಪಿಕಾ 2.0, ನೀವು ದೀಪಿಕಾ ಅವಳಿ–ಜವಳಿನಾ ಎಂದೆಲ್ಲ ಕೇಳುತ್ತಿದ್ದಾರೆ.

ರಿಜುತಾ ಅವರಿಗೆ ದೊರೆತಿರುವ ಜನಪ್ರಿಯತೆಯಿಂದಾಗಿ ಅವರು ಮಾಡೆಲಿಂಗ್‌ನಲ್ಲಿಯೂ ಮಿಂಚುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT