ಶುಕ್ರವಾರ, ಜುಲೈ 30, 2021
24 °C
ಅವರು ಒಬ್ಬ ‘ಬಿಗ್ ಫ್ಲರ್ಟ್‌‘!

ಸಿನಿಮಾ ಮಂದಿ ಜೊತೆ ಡೇಟಿಂಗ್ ಮಾಡಬಾರದು: ನಟಿ ಮನೀಶಾ ಲಂಬಾ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟಿ ಮನೀಶಾ ಲಂಬಾ ಅವರು ತಾವು ಹಿಂದೊಮ್ಮೆ ಖ್ಯಾತ ಬಾಲಿವುಡ್ ನಟನಿಂದ ಮೋಸ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.

‘ನಾನು ಅವರನ್ನು ಗಂಭಿರವಾಗಿ ಇಷ್ಟಪಟ್ಟು ಪ್ರೀತಿಸುತ್ತಿದ್ದರೇ, ಅವರು ನನ್ನ ಜೊತೆ ಫ್ಲರ್ಟ್‌ (ಕಾಲಹರಣ) ಮಾಡುತ್ತಿದ್ದರು. ಅವರು ಒಬ್ಬ ‘ಬಿಗ್ ಫ್ಲರ್ಟ್‌‘‘ ಎಂದು ರೆಡಿಯೋ ಜಾಕಿ ಸಿದ್ದಾರ್ಥ್ ಕನ್ನನ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನಾನು ಯಾವಾಗಲೂ ನಟರಿಂದ ಮಾತ್ರವಲ್ಲದೆ ಸಿನಿಮಾ ಉದ್ಯಮದಿಂದ ಡೇಟ್ ಮಾಡಲು ಬಯಸುವುದರಿಂದ ದೂರ ಸರಿಯುತ್ತೇನೆ. ಏಕೆಂದರೆ, ಅಲ್ಲಿ ಎಲ್ಲ ಸಮಯದಲ್ಲೂ ತುಂಬಾ ಸ್ವಾರ್ಥ ಇರುತ್ತದೆ. ನಾನು ಅವರ ಬಗ್ಗೆ ಏನನ್ನು ಹೇಳುವುದಿಲ್ಲ, ಏಕೆಂದರೆ ನಟರೊಂದಿಗೆ ಡೇಟಿಂಗ್ ಮಾಡುವ ಬಹಳಷ್ಟು ಜನರಿದ್ದಾರೆ. ಹಾಗಾಗಿ ಯಾರನ್ನಾದರೂ ನೋಯಿಸುವಂತಹ ಹೇಳಿಕೆ ನೀಡುವುದು ಸರಿಯಲ್ಲ‘ ಎಂದು ತಾವು ಯಾರಿಂದ ಮೋಸ ಹೋಗಿದ್ದೇನೆ ಎಂಬುದನ್ನು ಅವರು ಬಹಿರಂಗ ಪಡಿಸಿಲ್ಲ.

‘ಆದರೂ ತಾನು ಪ್ರಸ್ತುತ ಸಿನಿಮಾ ಹೊರತುಪಡಿಸಿ ತಮ್ಮ ಇಷ್ಟದ ಸಂಗಾತಿ ಜೊತೆ ಡೇಟಿಂಗ್‌ನಲ್ಲಿದ್ದೇನೆ. ಸಂತೋಷವಾಗಿದ್ದೇನೆ. ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ‘ ಎಂದು ಹೇಳಿದ್ದಾರೆ.

2015 ರಲ್ಲಿ ಮನೀಶಾ ಲಂಬಾ ಹೋಟೆಲ್ ಉದ್ಯಮಿ ರಾನ್ ಥಾಮ್ ಅವರನ್ನು ಮದುವೆಯಾಗಿದ್ದರು. ಆದರೆ, 2019 ರಲ್ಲಿ ಅವರು ದೂರವಾಗಿದ್ದರು.

ಮನೀಶಾ ಬಾಲಿವುಡ್‌ನ ಹನಿಮೂನ್ ಟ್ರಾವೆಲ್ಸ್‌, ಬಚನಾ ಏ ಹಸಿನೋ, ಕಿಡ್ನಾಪ್ ಆ್ಯಂಡ್ ವೆಲ್‌ಡನ್ ಅಬ್ಬಾ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿಯ ಬಿಗ್‌ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು