ಭಾನುವಾರ, ಜೂನ್ 7, 2020
28 °C

ಆನ್‌ಲೈನ್‌ ಫೋಟೊಗ್ರಪಿ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವಾಗ ನಿಕಾನ್ ಇಂಡಿಯಾ ಈ ತಿಂಗಳ ಅಂತ್ಯದವರೆಗೆ ಆನ್‌ಲೈನ್‌ ಮೂಲಕ ಉಚಿತ ಫೋಟೊಗ್ರಫಿ ತರಗತಿಗಳನ್ನು ಆಯೋಜಿಸಿದೆ.

‌ಛಾಯಾಗ್ರಾಹಕರಾದ ರಘು ರೈ ಮತ್ತು ಇನ್ನೂ ಹಲವು ಹೆಸರಾಂತ ಛಾಯಾಗ್ರಾಹಕರು ಈ ಆನ್‌ಲೈನ್‌ ಫೋಟೊಗ್ರಫಿ ತರಗತಿ‌‌ ನಡೆಸಿಕೊಡಲಿದ್ದಾರೆ. 

ವೆಡ್ಡಿಂಗ್‌ ಫೋಟೊಗ್ರಫಿ(ವಿವಾಹ), ವೈಲ್ಡ್ ಲೈಫ್, ಫೋಕಲ್ ಲೆಂತ್ ಎಂಡ್‌ ಇಫೆಕ್ಟ್, ಇಂಟೀರಿಯರ್ ಮತ್ತು ಆರ್ಕಿಟೆಕ್ಚರ್, ಸ್ಟ್ರೀಟ್, ಫುಡ್, ಪೆಟ್ ಫೋಟೊಗ್ರಫಿ ಸೇರಿ ಇನ್ನೂ ಹಲವು ವಿಷಯಗಳ ಕುರಿತು ತರಗತಿಗಳು ನಡೆಯಲಿವೆ.

ಕೆಲವು ತರಗತಿಗಳಲ್ಲಿ ಪ್ರಶ್ನೋತ್ತರಗಳು ಇರಲಿದ್ದು, ಶಿಬಿರಾರ್ಥಿಗಳ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ತಜ್ಞರು ಉತ್ತರಿಸಲಿದ್ದಾರೆ. ತರಗತಿಗಳು ನಿಕಾನ್‌ ಕಂಪನಿಯ ಅಧಿಕೃತ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯುಟ್ಯೂಬ್ ಪೇಜ್‌ಗಳಲ್ಲಿ ಲೈವ್ ವಿಡಿಯೊ ಸ್ಟ್ರೀಮಿಂಗ್‌ನಲ್ಲಿ ಲಭ್ಯವಿದೆ.

ತರಗತಿ ನಂತರ, ತಾವು ಸೆರೆಹಿಡಿದ ಛಾಯಾಚಿತ್ರಗಳನ್ನು Capture with Nikonನಲ್ಲಿ ಅಪ್ ಲೋಡ್ ಮಾಡುವ ಮೂಲಕ ಇಡೀ ಜಗತ್ತಿಗೆ ಆ ಚಿತ್ರಗಳನ್ನು ತೋರಿಸುವ ಅವಕಾಶ ಕಲ್ಪಿಸಿದೆ. ಜತೆಗೆ ಉತ್ತಮ ಚಿತ್ರಗಳಿಗೆ ಬಹುಮಾನಗಳನ್ನು ಪಡೆಯಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು