ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ವಿ ಸಿಂಧುಗೆ ಡಿನ್ನರ್‌ ಪಾರ್ಟಿ ಕೊಟ್ಟ ರಣವೀರ್–ದೀಪಿಕಾ ದಂಪತಿ: ಸೆಲ್ಫಿ ವೈರಲ್

Last Updated 12 ಸೆಪ್ಟೆಂಬರ್ 2021, 9:21 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಬ್ಯಾಡ್ಮಿಂಟನ್ ತಾರೆ, ಟೋಕಿಯೊ ಒಲಿಂಪಿಕ್ಸ್‌ನ ಪದಕ ವಿಜೇತೆ ಪಿ.ವಿ ಸಿಂಧು ಅವರನ್ನು ಶನಿವಾರ ರಾತ್ರಿ ಔತಣ ಕೂಟಕ್ಕೆ ಆಹ್ವಾನಿಸಿದ್ದರು.

ಈ ವೇಳೆ ಸಿಂಧು ಅವರ ಜೊತೆಗಿನ ರಣವೀರ್ ದಂಪತಿಯ ಸೆಲ್ಪಿ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊ ಹಂಚಿಕೊಂಡಿರುವ ನಟ ರಣವೀರ್ ಸಿಂಗ್, ‘ಸ್ಮ್ಯಾಶಿಂಗ್ ಟೈಮ್‘ ಎಂದು ಒಕ್ಕಣಿಕೆ ಬರೆದುಕೊಂಡಿದ್ದಾರೆ. ಇದಕ್ಕೆ ಸಿಂಧು, ‘ನಿಮ್ಮ ಜೊತೆ ಸಂತಸದ ಕ್ಷಣಗಳನ್ನು ಕಳೆದೆ, ಮತ್ತೆ ನಿಮ್ಮನ್ನು ಭೇಟಿಯಾಗಲು ಕಾತರಿಸುತ್ತಿದ್ದೇನೆ‘ ಎಂದು ರಣವೀರ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮುಂಬೈನ ವರ್ಲಿಯ ಹೋಟೆಲ್ ಒಂದರಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿಂಧು ಬಿಳಿ ಗೌನ್‌ನೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿದ್ದರೆ, ರಣವೀರ್ ದಂಪತಿ ಸಿಂಧುಗೆ ಔತಣ ಉಣಬಡಿಸಿ ಸಂತಸಪಟ್ಟರು.

ದೀಪಿಕಾ ಪಡುಕೋಣೆ ಅವರ ತಂದೆ ಕೂಡ ಬ್ಯಾಡ್ಮಿಂಟನ್ ತಾರೆಯಾಗಿದ್ದು, ದೀಪಿಕಾ ಅವರು ಈ ನಿಟ್ಟಿನಲ್ಲಿ ಬ್ಯಾಡ್ಮಿಂಟನ್‌ನೊಂದಿಗೆ ವಿಶೇಷ ಸೆಳೆತ ಹೊಂದಿದ್ದಾರೆ. ದೀಪಿಕಾ ಹಾಗು ರಣವೀರ್ ಅಭಿನಯದ ಕಪಿಲ್ ದೇವ್ ಜೀವನ ಕಥೆ ಹೊಂದಿರುವ ‘83‘ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇನ್ನು ಪಿ.ವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಭಾರತದಲ್ಲಿ ಯಾರೂ ಮಾಡದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು. ಟೋಕಿಯೊದಲ್ಲಿ ಕಂಚು ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT