ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲೋ ಇಂಡಿಯಾ ಮ್ಯಾಗಜಿನ್ ಕವರ್‌ನಲ್ಲಿ ಮಿಂಚಿದ ಕನ್ನಡತಿ ರಶ್ಮಿಕಾ ಮಂದಣ್ಣ

Last Updated 9 ಮಾರ್ಚ್ 2022, 11:12 IST
ಅಕ್ಷರ ಗಾತ್ರ

ಬೆಂಗಳೂರು: ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಗಳಿಸುವ ಜತೆಗೇ, ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ತೆಲುಗಿನ ‘ಪುಷ್ಪ‘ ಚಿತ್ರದಲ್ಲಿನ ನಟನೆಯು ರಶ್ಮಿಕಾಗೆ ವಿಶೇಷವಾಗಿ ಹೆಸರು ತಂದುಕೊಟ್ಟಿದೆ.

ಅದರ ಬೆನ್ನಲ್ಲೇ, ರಶ್ಮಿಕಾ ಫೋಟೊ ‘ಹಲೋ‘ ಇಂಡಿಯಾ ಮ್ಯಾಗಜಿನ್ ಕವರ್‌ನಲ್ಲಿ ಕಾಣಿಸಿಕೊಂಡಿದೆ.

ಆಕರ್ಷಕ ಬಣ್ಣದ ಉಡುಗೆ ತೊಟ್ಟು, ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ, ಹಲೋ ಮ್ಯಾಗಜಿನ್‌ನ ಮಾರ್ಚ್ ತಿಂಗಳ ಡಿಜಿಟಲ್ ಆವೃತ್ತಿಯಲ್ಲಿ ಮಿಂಚುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಶ್ಮಿಕಾ ಹೊಂದಿದ್ದು, ಅವರ ಖ್ಯಾತಿ ಅಂತರರಾಷ್ಟ್ರೀಯ ಮ್ಯಾಗಜಿನ್‌ಗಳ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT