ಸೋಮವಾರ, ಡಿಸೆಂಬರ್ 6, 2021
25 °C

ನಾನು ಆರ್‌ಸಿಬಿ ಫ್ಯಾನ್: ಹೊಸ ವಿಡಿಯೊ ಪೋಸ್ಟ್ ಮಾಡಿದ ಸಂಯುಕ್ತಾ ಹೆಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samyuktha Hegade Instagram Post

ಬೆಂಗಳೂರು: ‘ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ನಟಿ ಸಂಯುಕ್ತಾ ಹೆಗಡೆ, ‘ನಾನು ಆರ್‌ಸಿಬಿ ಫ್ಯಾನ್’ ಎನ್ನುತ್ತಾ ನೃತ್ಯದ ಕಿರು ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಂಟಿವಿ ರೋಡೀಸ್, ಬಿಗ್ ಬಾಸ್ ಕನ್ನಡ ಮತ್ತು ಎಂಟಿವಿ ಸ್ಪ್ಲಿಟ್ಸ್‌ವಿಲಾ ರಿಯಾಲಿಟಿ ಶೋಗಳಲ್ಲಿ ಸಂಯುಕ್ತಾ ಹೆಗಡೆ ಭಾಗವಹಿಸಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಟಿ ಸಂಯುಕ್ತಾ ಹೆಗಡೆ, ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಸಂಯುಕ್ತಾ ಹೆಗಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ಯಾಗ್ ಮಾಡಿ, ಡ್ಯಾನ್ಸ್ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

ಸಂಯುಕ್ತಾ ಅವರ ನೃತ್ಯ ಕಂಡು ಫಿದಾ ಆಗಿರುವ ಅಭಿಮಾನಿಗಳು, ಕಾಮೆಂಟ್ ಮಾಡಿ ಮತ್ತಷ್ಟು ವಿಡಿಯೊ, ಡ್ಯಾನ್ಸ್ ಪೋಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು