ಶುಕ್ರವಾರ, ಅಕ್ಟೋಬರ್ 22, 2021
29 °C

ಬೀಚ್‌ನಲ್ಲಿ ಕುಳಿತು ಮಳೆಗೆ ಹೆದರುವುದಿಲ್ಲ ಎಂದ ಸೋಫಿ ಚೌಧರಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sophie Chodry Instagram Post

ಬೆಂಗಳೂರು: ಸೋಫಿ ಚೌಧರಿ ನಟಿಯಾಗಿ, ಟಿವಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಹಾಗೂ ಗಾಯಕಿಯಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ಅಷ್ಟು ಮಾತ್ರವಲ್ಲದೆ, ಸೋಫಿ ಫಿಟ್ನೆಸ್ ಕುರಿತು ಕೂಡ ಅಪಾರವಾದ ಒಲವು ಹೊಂದಿದ್ದಾರೆ.

ಸೋಫಿ ಅವರ ಫ್ಯಾಷನ್ ಪ್ರಜ್ಞೆ, ಪ್ರಾಣಿ ಪ್ರೇಮದ ಬಗ್ಗೆಯೂ ಆಗಾಗ ಅವರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಸೋಫಿ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೊ ಒಂದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ನೀನು ಬಿರುಗಾಳಿಯೇ ಆಗಿರುವಾಗ ಮಳೆಗೆ ಏಕೆ ಹೆದರಬೇಕು ಎಂಬರ್ಥದ ಅಡಿಬರಹ ನೀಡಿ, ಬೀಚ್‌ನಲ್ಲಿ ಕುಳಿತಿರುವ ಫೋಟೊಗಳನ್ನು ಸೋಫಿ ಪೋಸ್ಟ್ ಮಾಡಿದ್ದಾರೆ.

ಒಂದೆಡೆ ನೀಲಾಕಾಶದ, ಮೋಡ ಕವಿದ ಹಿನ್ನೆಲೆಯಿದ್ದರೆ, ಮತ್ತೊಂದೆಡೆ ಸ್ವಚ್ಛ ಕಡಲ ತೀರ, ಸಮುದ್ರವಿದ್ದು, ಸೋಫಿ ಅದಕ್ಕೆ ಒಪ್ಪುವ ಬಣ್ಣದ ಉಡುಗೆ ಕೂಡ ಧರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು