ಗುರುವಾರ , ಅಕ್ಟೋಬರ್ 6, 2022
23 °C
ರಜನಿಕಾಂತ್ ಪುತ್ರಿ ಸೌಂದರ್ಯ, ಗಂಡು ಮಗುವಿನ ತಾಯಿಯಾಗಿರುವ ಸಂಭ್ರಮದಲ್ಲಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಖ್ಯಾತ ನಟ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಮತ್ತು ವಿಶಾಗನ್ ದಂಪತಿ ಸೆಪ್ಟೆಂಬರ್ 11ರಂದು ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ.

ಮಗು ಜನಿಸಿರುವ ಸಂಭ್ರಮವನ್ನು ಸೌಂದರ್ಯ ಅವರು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.

ಸೌಂದರ್ಯ ಅವರು ಈ ಹಿಂದೆ ಅಶ್ವಿನ್ ರಾಮ್‌ಕುಮಾರ್ ಜತೆ ವಿವಾಹವಾಗಿದ್ದರು. ಅವರಿಗೆ ವೇದ್‌ ಎಂಬ ಮಗನಿದ್ದಾನೆ. ಆತ ಅಶ್ವಿನ್ ಅವರ ಜತೆಗಿದ್ದಾನೆ. ಅವರ ವಿವಾಹ ಮುರಿದುಬಿದ್ದ ನಂತರ ಐಶ್ವರ್ಯ ಮತ್ತು ವಿಶಾಗನ್‌ ಮದುವೆಯಾದರು.

ಈಗ ಜನಿಸಿರುವ ಮಗುವಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ನಾಮಕರಣ ಮಾಡಲಾಗಿದೆ.

ಪುಟ್ಟ ಮಗುವಿನ ಜನನದ ಸಂದರ್ಭ ಸಹಕರಿಸಿದ ವೈದ್ಯರಿಗೂ ಸೌಂದರ್ಯ ಧನ್ಯವಾದ ಅರ್ಪಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು