ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೆಲ್ಲಿದ್ದರೂ, ನ್ಯೂಯಾರ್ಕ್‌ನವಳಾಗಿಯೇ ಇರುತ್ತೇನೆ: ಸುಹಾನಾ ಖಾನ್‌

Last Updated 25 ನವೆಂಬರ್ 2021, 7:14 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನೆಲ್ಲಿದ್ದರೂ, ನ್ಯೂಯಾರ್ಕ್‌ನವಳಾಗಿಯೇ ಇರುತ್ತೇನೆ. ನ್ಯೂಯಾರ್ಕ್ ಸದಾ ನನ್ನ ಹೃದಯದಲ್ಲಿರುತ್ತದೆ’ ಎಂದು ಸುಹಾನಾ ಖಾನ್ ಹೇಳಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ಪುತ್ರಿ ಸುಹಾನಾ ಖಾನ್, ನ್ಯೂಯಾರ್ಕ್‌ನಲ್ಲಿ ಸಿನಿಮಾ ಕೋರ್ಸ್ ಅಭ್ಯಾಸ ಮಾಡಿದ್ದಾರೆ.

ಅದಾದ ಬಳಿಕ ಭಾರತಕ್ಕೆ ಮರಳಿದ್ದಾರೆ. ಮುಂಬೈಗೆ ಬಂದ ಬಳಿಕವೂ ಆಗಾಗ ಅವರು ಇನ್‌ಸ್ಟಾಗ್ರಾಂ ಮೂಲಕ ಲಂಡನ್, ನ್ಯೂಯಾರ್ಕ್ ನೆನಪುಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಈ ಬಾರಿ ಸಹೋದರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಳಿಕ ಸುಹಾನಾ ಖಾನ್ ಕೆಲ ಕಾಲ ಸಾಮಾಜಿಕ ತಾಣಗಳಿಂದ ದೂರ ಉಳಿದಿದ್ದರು.

ನ್ಯೂಯಾರ್ಕ್ ಕುರಿತ ಫೋಟೊ ಒಂದನ್ನು ಪೋಸ್ಟ್ ಮಾಡಿರುವ ಸುಹಾನಾ ಖಾನ್, ಮತ್ತೆ ಅಲ್ಲಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT