ಗುರುವಾರ , ಆಗಸ್ಟ್ 18, 2022
27 °C

ನನ್ನ ಅಪ್ಪನಿಗೆ 56 ವರ್ಷ: 8 ಪ್ಯಾಕ್ ಫೋಟೊ ಪೋಸ್ಟ್ ಮಾಡಿದ ಶಾರುಖ್ ಪುತ್ರಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೊ ಒಂದು ಎಲ್ಲರ ಗಮನ ಸೆಳೆದಿದೆ.

ಪಠಾಣ್ ಚಿತ್ರದ ಹೊಸ ಲುಕ್‌ನಲ್ಲಿ ಶಾರುಖ್ ಖಾನ್ ಅವರು 8 ಪ್ಯಾಕ್ ಮೈಕಟ್ಟು ಪ್ರದರ್ಶಿಸಿದ್ದಾರೆ.

ಫೋಟೊದಲ್ಲಿ ಶಾರುಖ್ ಖಾನ್ ಅವರು ಶರ್ಟ್ ಕಳಚಿ, ಎಂಟು ಪ್ಯಾಕ್ ಪ್ರದರ್ಶಿಸಿದ್ದು, ಅದನ್ನು ಪೋಸ್ಟ್ ಮಾಡಿರುವ ಸುಹಾನಾ, ತಂದೆಯ ಫಿಟ್ನೆಸ್ ಅನ್ನು ಹೊಗಳಿದ್ದಾರೆ.

ನನ್ನ ಅಪ್ಪನಿಗೆ ಈಗ 56, ಅವರ ಮೈಕಟ್ಟು ನೋಡಿ.. ಹೀಗಿರುವಾಗ ನಾವು ನೆಪ ಹೇಳುವಂತಿಲ್ಲ ಎಂದು ಸುಹಾನಾ ಹೇಳಿದ್ದಾರೆ.

ಸುಹಾನಾ ಪೋಸ್ಟ್ ಮಾಡಿರುವ ಚಿತ್ರವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ವಾಹ್ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು