ಬುಧವಾರ, ಆಗಸ್ಟ್ 4, 2021
26 °C

ಸುಶ್ಮಿತಾ ರೊಮ್ಯಾಂಟಿಕ್ ವರ್ಕೌಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಸಿಂಗಲ್ ಮದರ್, ಮಾಜಿ ಭುವನ ಸುಂದರಿ 42 ವರ್ಷ ವಯಸ್ಸಿನ ಸುಶ್ಮಿತಾ ಸೇನ್ ತಮ್ಮ ಗ್ಲಾಮರ್‌ ನಡೆ ನುಡಿಗೆ ಹೆಸರಾದವರು. ಈಗ 28 ವರ್ಷ ವಯಸ್ಸಿನ ರೋಹ್ಮಾನ್ ಶಾವ್ಲ್ ಜತೆ ಸಹಜೀವನ ನಡೆಸುತ್ತಿದ್ದಾರೆ.

ಪ್ರಿಯತಮ ರೋಹ್ಮಾನ್ ಶಾವ್ಲ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ, ಇತ್ತೀಚಿಗೆ ವರ್ಕ್‌ಔಟ್‌ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಸುಶ್ಮಿತಾ, ಪ್ರಿಯತಮನ ಜೊತೆ ರೊಮ್ಯಾಂಟಿಕ್ ವರ್ಕ್‌ಔಟ್‌ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ಈ ವಿಡಿಯೊಗೆ ಲಕ್ಷಾಂತರ ಮೆಚ್ಚುಗೆ ವ್ಯಕ್ತವಾಗಿದೆ. 

‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ರೋಷನ್. ಸ್ಥಿರ ಸಂಬಂಧಕ್ಕೆ ಸಮತೋಲನದ ಬದುಕು ಅಗತ್ಯ. ಹೊಂದಿಕೊಳ್ಳುವ ಮನಸ್ಥಿತಿ, ಪರಸ್ಪರರ ಮೇಲೆ ಆಳವಾದ ನಂಬಿಕೆ ಇರಬೇಕು’ ಎಂದು ವಿಡಿಯೊ ಜತೆ ಬರೆದುಕೊಂಡಿದ್ದಾರೆ.

ಸುಶ್ಮಿತಾ ವರ್ಕ್‌ಔಟ್‌ ವಿಡಿಯೊ ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ  ರೋಷನ್ ಜೊತೆ ವರ್ಕ್‌ಔಟ್‌ ಮಾಡುತ್ತಿರುವ ವಿಡಿಯೊ ಹಂಚಿಕೊಂಡು ಸುದ್ದಿಯಾಗಿದ್ದರು.

ಯಾರೇ ಒಟ್ಟಿಗಿದ್ದರೂ ‘ಇವರು ಮದುವೆಯಾಗಲಿದ್ದಾರೆ’ ಎಂದು ಮಾತನಾಡಿಕೊಳ್ಳುವಂತೆ ಇವರ ವಿಚಾರದಲ್ಲೂ ‘ಹಸೆಮಣೆ ಏರಲಿದ್ದಾರೆ’ ಎನ್ನುವ ಮಾತು ಇದೆ. ಸದ್ಯ ಲಾಕ್‌ಡೌನ್‌ನಲ್ಲಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದು, ಫಿಟ್‌ನೆಸ್‌ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು