ಭಾನುವಾರ, ಅಕ್ಟೋಬರ್ 2, 2022
20 °C
ರಣವೀರ್ ಸಿಂಗ್ ಅವರು ಬೆತ್ತಲೆ ಮೈ ಪ್ರದರ್ಶಿಸಿ ಸುದ್ದಿಯಾಗಿದ್ದರು..

ಉರ್ಫಿ ಜಾವೇದ್ ಫೋಟೊಶೂಟ್‌ಗೆ ರಣವೀರ್ ಸಿಂಗ್ ಸ್ಫೂರ್ತಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಜಾಹೀರಾತು ಒಂದರ ಫೋಟೊಶೂಟ್‌ಗಾಗಿ ಬೆತ್ತಲೆ ಮೈ ಪ್ರದರ್ಶಿಸಿ ಸುದ್ದಿಯಾಗಿದ್ದರು.

ರಣವೀರ್ ಸಿಂಗ್ ಅವರ ಹೊಸ ಅವತಾರದ ಫೋಟೊಶೂಟ್ ನೋಡಿದ ಹಲವರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಅಲ್ಲದೆ, ಟ್ರೋಲ್ ಕೂಡ ಆಗಿತ್ತು.

ಆದರೆ ರಣವೀರ್ ಸಿಂಗ್ ಅವರ ಫೋಟೊಶೂಟ್‌ನಿಂದ ಸ್ಫೂರ್ತಿ ಪಡೆದ ನಟಿ ಉರ್ಫಿ ಜಾವೇದ್, ಗುಲಾಬಿ ಹೂವಿನ ಪಕಳೆಯ ರಾಶಿಯಲ್ಲಿ ಮಲಗಿಕೊಂಡಿರುವ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ಒಟಿಟಿ ಮೂಲಕ ಜನಪ್ರಿಯತೆ ಗಳಿಸಿರುವ ಉರ್ಫಿ ಜಾವೇದ್, ವಿವಿಧ ರೀತಿಯ ಸ್ಟೈಲ್ ಸ್ಟೇಟ್‌ಮೆಂಟ್ ಮೂಲಕ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

ಈ ಬಾರಿ ರಣವೀರ್ ಸಿಂಗ್ ಅವರ ಫೋಟೊ ಶೂಟ್ ನೋಡಿ, ತಾವೇನೂ ಕಡಿಮೆಯಿಲ್ಲ ಎಂದು ವಿಡಿಯೊ ಪೋಸ್ಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು