ಬೆಂಗಳೂರು: ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಭಾನುವಾರ 34ನೇ ಹುಟ್ಟುಹಬ್ಬದ ಸಂಭ್ರಮ.
ಈ ಸಂದರ್ಭದಲ್ಲಿ ಬಾಲಿವುಡ್ ಮಂದಿ, ಅನುಷ್ಕಾ ಗೆಳೆಯ–ಗೆಳತಿಯರು ಹಾಗೂ ಉದ್ಯಮದ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಅಲ್ಲದೆ, ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್‌ಡೇ ಶುಭಾಶಯ ತಿಳಿಸಿದ್ದಾರೆ.
ಅನುಷ್ಕಾ ಪತಿ ವಿರಾಟ್ ಕೊಹ್ಲಿ, ಪ್ರೀತಿಯ ಪತ್ನಿಗಾಗಿ ವಿಶೇಷವಾಗಿ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ..
‘ನೀನು ಹುಟ್ಟಿರುವುದಕ್ಕೆ ದೇವರಿಗೆ ಧನ್ಯವಾದ. ನೀನಿಲ್ಲದೆ ನಾನೇನು ಮಾಡುತ್ತಿದ್ದೆ ಎಂದು ನನಗೆ ತಿಳಿದಿಲ್ಲ. ನೀನು ನಿಜಕ್ಕೂ ಬ್ಯೂಟಿಫುಲ್‘ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
Thank god you were born ❤️. I don’t know what I would do without you. You’re truly beautiful inside out ❤️. Had a great afternoon with the sweetest folks around 😃@AnushkaSharmapic.twitter.com/JxGEnBtHXW