ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿಕಾ ಹುಟ್ಟು ಹಬ್ಬ: 'ಪುಷ್ಪ 2, ದಿ ಗರ್ಲ್​​ಫ್ರೆಂಡ್'​​​ ಪೋಸ್ಟರ್‌ ಬಿಡುಗಡೆ

Published 5 ಏಪ್ರಿಲ್ 2024, 6:43 IST
Last Updated 5 ಏಪ್ರಿಲ್ 2024, 6:43 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಪ್ರಯುಕ್ತ ‘ಪುಷ್ಪ 2’ ಹಾಗೂ 'ದಿ ಗರ್ಲ್​​ಫ್ರೆಂಡ್​​​' ಚಿತ್ರದ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ.

‘ಪುಷ್ಪ 2’ ಚಿತ್ರದ ಎಕ್ಸ್‌ ಖಾತೆಯಲ್ಲಿ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ರಶ್ಮಿಕಾ, ಸೀರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಸಾಕಷ್ಟು ಆಭರಣ ತೊಟ್ಟುಕೊಂಡಿದ್ದಾರೆ.

ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ ಎಂದೂ ಪೋಸ್ಟರ್​ನಲ್ಲಿ ಬರೆಯಲಾಗಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಅಲ್ಲು ಅರ್ಜುನ್ ತೆರೆ ಹಂಚಿಕೊಂಡಿದ್ದಾರೆ.

'ದಿ ಗರ್ಲ್​​ಫ್ರೆಂಡ್ ​' ಚಿತ್ರ ತಂಡ ಕೂಡ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ರಶ್ಮಿಕಾ ಅವರಿಗೆ ವಿಶೇಷವಾಗಿ ಶುಭ ಕೋರಿದೆ.

ಸದ್ಯ ರಶ್ಮಿಕಾ ಮಂದಣ್ಣ ಅವರು ಹುಟ್ಟು ಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT