ಗುರುವಾರ , ಏಪ್ರಿಲ್ 2, 2020
19 °C

‘ಸಂಬಂಧಗಳ ಸುತ್ತ’ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಮೂವ್ ಥಿಯೇಟರ್‌ ತಂಡದ ‘ಸಂಬಂಧಗಳ ಸುತ್ತ’ ನಾಟಕ ನಗರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ತಂಡ ಸತತ 12 ವರ್ಷಗಳಿಂದ ಬಹುಮುಖಿ ನಾಟಕಗಳನ್ನು ಪ್ರದರ್ಶಿಸುತ್ತಿದೆ.

2017ರಲ್ಲಿ ಈ ನಾಟಕ ಮೊದಲ ಪ್ರದರ್ಶನ ಕಂಡಿತ್ತು. ಕ್ರೊವೇಷ್ಯಾದ ಮಿರೊ ಗ್ರವಾನ್‌ ಅವರ ‘ಆಲ್‌ ಎಬೊಟ್‌ ವುಮೆನ್‌’ ನಾಟಕವನ್ನು ಕನ್ನಡಕ್ಕೆ ತರುವ ಪ್ರಯತ್ನ ಇದಾಗಿದೆ. ಅಭಿಷೇಕ್‌ ಅಯ್ಯಂಗಾರ್‌ ಅವರು ಕನ್ನಡಕ್ಕೆ ತಂದಿದ್ದಾರೆ. ಸಿಂಧು ಹೆಗಡೆ ನಿರ್ದೇಶಿಸಿದ್ದಾರೆ.

ಹೆಣ್ಣನ್ನು ಸಮಾಜದಲ್ಲಿ ನೋಡುವ ರೀತಿ ಮೊದಲಿನಂತೆ ಇಲ್ಲ. ಸಾಕಷ್ಟು ಬದಲಾವಣೆಗಳು ಆಗಿವೆ. ಆದರೂ ಹೆಣ್ಣಿನ ಅಂತರಂಗವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಸಿನಿಮಾ ಹಾಗೂ ಧಾರವಾಹಿಯಲ್ಲಿ ಹೆಣ್ಣನ್ನು ಕ್ರೂರಿ ಹಾಗೂ ಅಬಲೆ ಎಂಬ ಎರಡೂ ಭಿನ್ನ ನೆಲೆಯಿಂದ ಚಿತ್ರಿಸಲಾಗುತ್ತಿದೆ. ಇಲ್ಲವೇ ಆಕೆ ತ್ಯಾಗಮಯಿಯಾಗಬೇಕು. ಈ ರೀತಿಯ ಸಿದ್ದಮಾದರಿಗಳನ್ನು ಹಾಗೂ ರೂಢಿಗತ ವಿಚಾರಗಳನ್ನು ನಾಟಕ ನಮ್ಮ ಮುಂದಿಡುತ್ತದೆ.

ಜುಲೈ 3ರಂದು ಜೆ.ಪಿ.ನಗರದ ರಂಗಶಂಕರದಲ್ಲಿ ರಾತ್ರಿ 7.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು