ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.14ಕ್ಕೆ ‘ಮಲೆಗಳಲ್ಲಿ ಮದುಮಗಳು’ ನಾಟಕ ನೂರನೇ ಪ್ರದರ್ಶನ

ಶತಕದ ಹೊಸ್ತಿಲಲ್ಲಿ ಮದುಮಗಳು
Last Updated 7 ಫೆಬ್ರುವರಿ 2020, 19:16 IST
ಅಕ್ಷರ ಗಾತ್ರ

ಬೆಂಗಳೂರು:ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ರಂಗಪ್ರಯೋಗವು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಶತಕದ ಸಂಭ್ರಮಕ್ಕೆ ನಾಲ್ಕು ಪ್ರದರ್ಶನಗಳು ಮಾತ್ರ ಬಾಕಿಯಿವೆ.

ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಫೆ.29ರವರೆಗೆ ಪ್ರದರ್ಶನವನ್ನು ಏರ್ಪಡಿಸಿದೆ. 5ನೇ ಅವತರಣಿಕೆಯಲ್ಲಿ 10 ಪ್ರದರ್ಶನಗಳನ್ನು ಕಂಡಿದ್ದು, ಈ ಮೂಲಕ ಒಟ್ಟು 96 ಪ್ರದರ್ಶನಗಳನ್ನು ಪೂರೈಸಿದೆ. ಫೆ.14ರಂದು ನೂರರ ಸಂಭ್ರಮ ಆಚರಿಸಲಿದೆ. ಒಟ್ಟು24 ಪ್ರದರ್ಶನಗಳನ್ನು ಪ್ರಸ್ತುತಪಡಿಸುವ ಮೂಲಕ 109 ಪ್ರದರ್ಶನಕ್ಕೆ ತೆರೆಯೆಳೆಯಲು ಎನ್‌ಎಸ್‌ಡಿ ನಿರ್ಧರಿಸಿದೆ. ಇದು ಕೊನೆಯ ಅವತರಣಿಕೆ ಆಗಿದ್ದು, ಸಹಜವಾಗಿ ಪ್ರೇಕ್ಷರ ಸಂಖ್ಯೆ ಹೆಚ್ಚಾಗಿದ್ದು, ವಾರಾಂತ್ಯದಲ್ಲಿ ಕೆಲವರು ಟಿಕೆಟ್ ಸಿಗದೆಯೇ ವಾಪಸ್‌ ತೆರಳುತ್ತಿದ್ದಾರೆ.

ಪ್ರತಿ ಸೋಮವಾರ ಮತ್ತು ಬುಧವಾರ ಸರಾಸರಿ 500 ಮಂದಿ ಪ್ರದರ್ಶನ ವೀಕ್ಷಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಟಿಕೆಟ್‌ ದರದಲ್ಲಿರಿಯಾಯಿತಿ ನೀಡಲಾಗಿದೆ. ಶುಕ್ರವಾರ ಮತ್ತು ಶನಿವಾರ ಸರಾಸರಿ 1 ಸಾವಿರ ಮಂದಿ ವೀಕ್ಷಿಸುತ್ತಿದ್ದಾರೆ. ಈ ಬಾರಿ 10 ಪ್ರದರ್ಶನಗಳಿಂದ 7 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಟಿಕೆಟ್‌ಗಳಿಂದ ₹ 9 ಲಕ್ಷ ಸಂಗ್ರಹವಾಗಿದೆ.ಪ್ರದರ್ಶನಕ್ಕೆ ಒಟ್ಟು₹ 54 ಲಕ್ಷ ಖರ್ಚಾಗಲಿದ್ದು,₹30 ಲಕ್ಷ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದೆ. ಉಳಿದ ಹಣವನ್ನು ಟಿಕೆಟ್‌ಗಳಿಂದಲೇ ಸಂಗ್ರಹಿಸಬೇಕಾಗಿದೆ.

ವಾಪಸ್‌ ತೆರಳಿದ ರಂಗಾಸಕ್ತರು: ಒಂಬತ್ತು ಗಂಟೆಗಳರಾತ್ರಿಪೂರ್ತಿ ರಂಗಪ್ರಯೋಗ ನಾಲ್ಕು ಬಯಲು ವೇದಿಕೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಭಾಂಗಣದಲ್ಲಿ ಸಾವಿರ ಮಂದಿ ಕೂರಬಹುದು. ವಾರಾಂತ್ಯದಲ್ಲಿ ಟಿಕೆಟ್‌ ದೊರೆಯದೆ ನೂರಕ್ಕೂ ಅಧಿಕ ಮಂದಿ ವಾಪಸ್‌ ತೆರಳುತ್ತಿದ್ದಾರೆ. ಆಯೋಜಕರು ಮುಂದಿನ ಪ್ರದರ್ಶನಕ್ಕೆ ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ವಾರಾಂತ್ಯದಲ್ಲಿ ಪ್ರೇಕ್ಷಕರು ಅಧಿಕ. ವಿದ್ಯಾರ್ಥಿಗಳಿಗೆ ವಾರದ ಆರಂಭದ ಪ್ರದರ್ಶನಗಳಿಗೆ ಅವಕಾಶ ನೀಡಿದ್ದೇವೆ’ ಎಂದುಎನ್‌ಎಸ್‌ಡಿಯ ನಿರ್ದೇಶಕ ಸಿ.ಬಸವಲಿಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT