‘ಭವ ಎನಗೆ ಹಿಂಗಿತು’ ನಾಟಕ ಪ್ರದರ್ಶನ

7

‘ಭವ ಎನಗೆ ಹಿಂಗಿತು’ ನಾಟಕ ಪ್ರದರ್ಶನ

Published:
Updated:
Prajavani

ಕರಣಂ ಪವನ್‌ ಪ್ರಸಾದ್ ರಚಿಸಿರುವ ’ಭವ ಎನಗೆ ಹಿಂಗಿತು‘  ಹೊಸ ನಾಟಕ ಇದೇ 16ರಂದು ಪ್ರದರ್ಶನಗೊಳ್ಳಲಿದೆ. 

ಹನುಮಂತನಗರದ ಕೆ.ಎಚ್‌.ಕಲಾಸೌಧದಲ್ಲಿ ಸಂಜೆ 4.30 ಹಾಗೂ 7 ಗಂಟೆಗೆ ಎರಡು ಪ್ರದರ್ಶನ ನಡೆಯಲಿದೆ. ಪ್ರವರ ಆರ್ಟ್ಸ್‌ ಸ್ಟುಡಿಯೋ ಈ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. 

ಒಬ್ಬ ಪ್ರಸಿದ್ಧ ಬರಹಗಾರ ಪ್ರಭು ಹಾಗೂ ಆತನ ಮಗ ಚಿರಂತನ ಬದುಕಿನ ಸುತ್ತ ಹೆಣೆದಿರುವ ಕಥೆಯೇ ಭವ ಎನಗೆ ಹಿಂಗಿತು ನಾಟಕವಾಗಿದೆ. ಪ್ರಭುವಿನ ದಿನನಿತ್ಯದ ಬದುಕು, ಆತನ ಮಾನಸಿಕ ತುಮುಲಗಳು ಕಥೆಯ ಮುಖ್ಯ ಹಂದರ.

ಕೆಲಸದಾಕೆ ಸರಳ ಮತ್ತು ಆತನ ಗಂಡ ರಾಜು ಈ ಕಥೆಗೆ ಕುತೂಹಲಕಾರಿ ತಿರುವುಗಳನ್ನು ನೀಡುತ್ತಾರೆ. ಸಂಭಾಷಣೆಯ ಜೊತೆಗಿನ ಅಭಿನಯ ಹಾಗೂ ರೋಚಕ ಕಥೆಯಿಂದ ನಾಟಕ ಕುತೂಹಲಕಾರಿ. 

ನಿರ್ದೇಶನ–ಹನು ರಾಮಸಂಜೀವ, ರಚನೆ–ಕರಣಂ ಪವನ್‌ ಪ್ರಸಾದ್, ಸಂಗೀತ–ಪ್ರಸನ್ನ ಕುಮಾರ್‌, ಬೆಳಕು–ಮಂಜು ನಾರಾಯಣ್‌, ಛಾಯಾಗ್ರಹಣ–ಶ್ರೀನಿವಾಸ್ ಜೋಷಿ, ರಂಗದ ಮೇಲೆ–ಹನು ರಾಮಸಂಜೀವ, ರಾಜ್ ಆರಾಧ್ಯ, ಯಶ್ವಂತ್‌ ಸಾಗರ್‌.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !