ಶುಕ್ರವಾರ, ಏಪ್ರಿಲ್ 16, 2021
31 °C

Bigg boss 8| ಕೊಡಗಿನ ಬೆಡಗಿ ನಟಿ ನಿಧಿ ಸುಬ್ಬಯ್ಯ ಬಿಗ್‌ ಬಾಸ್‌ ಮನೆಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ, ಕೊಡಗು ಮೂಲದ ನಿಧಿ ಸುಬ್ಬಯ್ಯ ಅವರು 8ನೇ ಆವೃತ್ತಿಯ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿಧಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದವರು. ಮಾಡೆಲಿಂಗ್‌ನಲ್ಲೂ ಆಸಕ್ತಿ ಹೊಂದಿದ್ದರು. ಮಾಡೆಲಿಂಗ್‌ ಮೂಲಕವೇ ಅವರು ಚಿತ್ರರಂಗ ಪ್ರವೇಶಿಸಿದ್ದರು. ಬಿಗ್‌ ಬಾಸ್‌ಗೆ ಅವಕಾಶ ಸಿಕ್ಕಾಗ ತಮಗೆ 'ನರ್ವಸ್‌' ಆಗಿದ್ದಾಗಿ ನಿಧಿ ಹೇಳಿದರು.

ಅದೇ ಹೊತ್ತಲ್ಲೇ ತಾವು ಕೋಪಿಷ್ಠೆ ಎಂದೂ ಹೇಳಿದ್ದಾರೆ. ಎಷ್ಟ ಬೇಗ ಕೋಪ ಬರುತ್ತದೆಯೋ ಅಷ್ಟೇ ಬೇಗ ತಮ್ಮ ಕೋಪ ಶಮನವಾಗುತ್ತದೆ ಎಂದು ಅವರು ನಗುತ್ತಲೇ ಹೇಳಿದರು. ಆಸಕ್ತಿ ಹೊಂದಿರುವುದಾಗಿ ನಿಧಿ ಹೇಳಿಕೊಂಡರು.

'ನಾನು ಅಲ್ಲಿ ಒಂದು ವೇಳೆ ಅತ್ತರೆ, ನೀನು ಮನೆಯಲ್ಲಿ ಕುಳಿತು ಅಳಬೇಡ,' ಇದು ನಿಧಿ ಸುಬ್ಬಯ್ಯ ತಮ್ಮ ತಾಯಿಗೆ ಹೇಳಿ ಹೊರಟ ಮಾತಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು