ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಅವರ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಈಗ ಮುದ್ದಾದ ಮಗನಿಗೆ ನಾಮಕರಣ ಮಾಡಿದ್ದಾರೆ.

ನಟಿ ರಶ್ಮಿ ಪ್ರಭಾಕರ್ ಅವರು 2022 ಏಪ್ರಿಲ್ 25ರಂದು ನಿಖಿಲ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಅವರು ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದರು. ಅಕ್ಟೋಬರ್ 3ರಂದು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದರು. ನಿನ್ನೆ (ಫೆಬ್ರುವರಿ 12) ದಂಪತಿ ತಮ್ಮ ಮಗನಿಗೆ ‘ಅಗಸ್ತ್ಯ ಸಿದ್ದಾಂತ್’ ಎಂದು ನಾಮಕರಣ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಮುದ್ದು ಮಗುವಿಗೆ ಸದ್ಯದಲ್ಲೆ ಹೆಸರು ಇಡುವ ಕಾರ್ಯಕ್ರಮ ಮಾಡುತ್ತೇವೆ. ಯಾವುದಾದರು ಒಳ್ಳೆಯ ಹೆಸರಿದ್ದರೆ ಸೂಚಿಸಿ ಪೋಸ್ಟ್ ಹಾಕಿದ್ದರು. ಇದಕ್ಕೆ ಅಭಿಮಾನಿಗಳು ಚಂದದ ಹೆಸರುಗಳನ್ನು ಸೂಚಿಸಿದ್ದರು. ಈಗ ಅದ್ಧೂರಿಯಾಗಿ ಸಂಪ್ರದಾಯದ ಪ್ರಕಾರ ಮಗುವಿಗೆ ಹೆಸರಿಟ್ಟಿದ್ದಾರೆ.

ಈ ಸಮಾರಂಭದಲ್ಲಿ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಕಾವ್ಯ ಶೈವ, ಮೋಕ್ಷಿತಾ ಪೈ, ನಟಿ,ನಿರೂಪಕಿ ಅನುಪಮಾ ಗೌಡ, ಗೊಂಬೆ ಖ್ಯಾತಿಯ ನೇಹಾ ಗೌಡ, ನಟಿ ಸುಪ್ರಿತಾ ಸತ್ಯನಾರಾಯಣ, ಇಶಿತಾ ವರ್ಷ ಸೇರಿದಂತೆ ಜನಪ್ರಿಯ ನಟಿಯರು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಶ್ಮಿ ಪ್ರಭಾಕರ್ ಮಗನಿಗೆ ಆರ್ಶೀವಾದ ಮಾಡಿದ್ದಾರೆ.

ನಟಿ ರಶ್ಮಿ ಅವರು, ‘ಲಕ್ಷ್ಮೀ ಬಾರಮ್ಮ’, ‘ಜೀವನಚೈತ್ರ’, ‘ಶುಭವಿವಾಹ’, ‘ಮನಸೆಲ್ಲಾ ನೀನೇ’ ಸೇರಿದಂತೆ ಕನ್ನಡ ತೆಲುಗು, ತಮಿಳು ಧಾರಾವಾಹಿಗಳಲ್ಲೂ ನಟಿಸಿ ರಶ್ಮಿ ಪ್ರಭಾಕರ್ ಜನಪ್ರಿಯತೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.