ಜೀ಼ ಕನ್ನಡದ ಜನಪ್ರಿಯ ಪಾರು ಧಾರಾವಾಹಿ ತಮ್ಮ ಅಭಿಮಾನಿಗಳಿಗೆ ಪಾತ್ರಧಾರಿಗಳಾದ ಪಾರು (ಮೋಕ್ಷಿತಾ), ಆದಿತ್ಯ (ಶರತ್), ದಾಮಿನಿ (ಸಿತಾರಾ) ಮತ್ತು ಅಖಿಲಾಂಡೇಶ್ವರಿ (ವಿನಯಾ ಪ್ರಸಾದ್) ಅವರನ್ನು ಭೇಟಿಯಾಗುವ ಅವಕಾಶ ನೀಡಿತ್ತು. ದೀಪಾವಳಿಯಂದು ಅರಸನಕೋಟೆ ಮನೆಯಲ್ಲಿ ‘ಪಾರು ಸೀರೆ ಸುಗ್ಗಿ’ ಸಂಭ್ರಮ ಸ್ಪರ್ಧೆಯನ್ನು ಆಯೋಜಿಸಿತ್ತು.

ಧಾರಾವಾಹಿಯ ಪ್ರತಿ ಸಂಚಿಕೆಯ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಎಸ್‌ಎಂಎಸ್ ಮೂಲಕ ಉತ್ತರಿಸಿದ 10 ಅದೃಷ್ಟ ವಿಜೇತರು, ಅಖಿಲಾಂಡೇಶ್ವರಿ ಮತ್ತು ಅವರ ಅರಸನಕೋಟೆ ಕುಟುಂಬ ಆಯೋಜಿಸಿದ್ದ ಸಂಭ್ರಮಾಚರಣೆಯ ಹಬ್ಬದ ರುಚಿ ಸವಿಯುವ ಅವಕಾಶ ಪಡೆದರು. ವಿಜೇತರಿಗೆ ₹25 ಸಾವಿರ ಬೆಲೆಬಾಳುವ ಸೀರೆಯನ್ನು ಬಹುಮಾನವಾಗಿ ನೀಡಲಾಯಿತು. ಈ ಸಂಭ್ರಮಾಚರಣೆ ಅಕ್ಟೋಬರ್ 26 ರಂದು ಅರಸನಕೋಟೆ ಮನೆಯಲ್ಲಿ ನಡೆಯಿತು.

ಈ ರಸ ಪ್ರಶ್ನೆಯಲ್ಲಿ ಭಾಗವಹಿಸಿದ ಒಟ್ಟು 7 ಲಕ್ಷ ವೀಕ್ಷಕರ ಪೈಕಿ ಧಾರವಾಡದ ಪೂರ್ಣಿಮಾ, ಚಿತ್ರದುರ್ಗದ ಅನಿತಾ, ತುಮಕೂರಿನ ಕಾವ್ಯಾ, ಬೆಳಗಾವಿಯ ಶಿಲ್ಪಾ, ಹಾಸನದ ಮಹಾದೇವಮ್ಮ, ಕೊಪ್ಪಳದ ಚೈತ್ರ, ಶಿವಮೊಗ್ಗದ ಚಂದ್ರಕಲಾ ಮತ್ತು ಮೈಸೂರಿನ ರಾಣಿ ಸೇರಿ ಹತ್ತು ವಿಜೇತರು ತಮ್ಮ ಪ್ರೀತಿಯ ಕಲಾವಿದರೊಂದಿಗೆ ಸಂಜೆ ಕಳೆಯುವ ಅವಕಾಶ ಪಡೆದರು.

ಚಿತ್ರದುರ್ಗದ ಅನಿತಾ, ತನ್ನ ಮಗ ಕುಶಾಲ್ ಕಾರ್ಯಕ್ರಮವನ್ನು ನೋಡಲು ಹೇಗೆ ಉತ್ಸುಕನಾಗುತ್ತಾನೆ ಮತ್ತು ಆದಿತ್ಯ ನೀಡಿದ ಪ್ರತಿಯೊಂದು ಸಂಭಾಷಣೆಯನ್ನು ಹೇಗೆ ಅನುಕರಿಸುತ್ತಾನೆ ಎಂದು ವಿವರಿಸಿದರು.

ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು, ತಮ್ಮ ನೆಚ್ಚಿನ ಕಲಾವಿದರಿಗೆ ವಿಶಿಷ್ಟ ಉಡುಗೊರೆಗಳನ್ನು ತಂದಿದ್ದರು. ಕೊಪ್ಪಳದ ರೇಣುಕಾ ದೇವಿ ಅವರು ಅಖಿಲಾಂಡೇಶ್ವರಿಗೆ ನೀಲಿ ಕಾಟನ್ ಸೀರೆ ಮತ್ತು ಸಾಂಪ್ರದಾಯಿಕ ಬಾಗಿನ ನೀಡಿದರು. ಅಖಿಲಾಂಡೇಶ್ವರಿ ಅವರು ಈ ಸೀರೆಯನ್ನು ‘ಪಾರು’ ಧಾರಾವಾಹಿಯ ಒಂದು ಕಂತಿನಲ್ಲಾದರೂ ಉಡುವುದಾಗಿ ಭರವಸೆ ನೀಡಿದರು. ಶಿವಮೊಗ್ಗದ ಮೇಘನಾ ‘ಪಾರು’ವಿಗೆ ಗಣೇಶನ ವಿಗ್ರಹ ಉಡುಗೊರೆಯಾಗಿ ನೀಡಿದರು. ಧಾರವಾಡ ಮೂಲದ ಪೂರ್ಣಿಮಾ ವಿಶೇಷ ಸಿಹಿತಿಂಡಿಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.