ಜನಪ್ರಿಯ ಕಾರ್ಯಕ್ರಮ ‘ಕೌನ್‌ಬನೇಗಾ ಕರೋಡ್‌ಪತಿ’ – ಈ ಬಾರಿಯ ಸೀಸನ್ ಯಾರು ನಡೆಸಿಕೊಡುತ್ತಾರೆ..? ಲಾಕ್‌ಡೌನ್ ಇರುವುದರಿಂದ, ಬಿಗ್‌ಬಿ ಅಮಿತಾಭ್ ಬಚ್ಚನ್ ಬರುತ್ತಾರೋ ಇಲ್ಲವೋ... ಇಂಥ ಹಲವು ಪ್ರಶ್ನೆಗಳುಅಭಿಮಾನಿಗಳ ವಲಯದಲ್ಲಿ ಕಾಡುತ್ತಿವೆ.

‘ಅನುಮಾನವೇ ಬೇಡ, ಈ ಬಾರಿಯ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮವನ್ನು ನಾನೇ ನಡೆಸಿಕೊಡುತ್ತಿದ್ದೇನೆ..’ ಎನ್ನುತ್ತಿದ್ದಾರೆ ಬಿಗ್‌ಬಿ ಅಮಿತಾಭ್ ಬಚ್ಚನ್. ಕರೋಡ್‌ಪತಿಯ 12ನೇ ಸೀಸನ್ ನಡೆಸಿಕೊಡಲು ಸಿದ್ಧರಾಗುತ್ತಿರುವ ಅವರು, ಸಿದ್ಧತೆ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮಾಸ್ಕ್, ಸ್ಯಾನಿಟೈಸರ್ ಸೇರಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ನಡೆಸಲಾಗಿದೆ. ಮೊದಲು ಎರಡು ದಿನಗಳ ಚಿತ್ರೀಕರಣದ ಬಗ್ಗೆ ಪ್ಲಾನ್ ಮಾಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಮುಗಿಸಲಾಯಿತು. ಹಾಗೇ ತಂಡ ಎಲ್ಲಿಯೂ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಮುರಿಯಲಿಲ್ಲ’ ಎಂದು ಅಮಿತಾಭ್ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ಅಂದ ಹಾಗೆ, ‘ಕೌನ್ ಬನೇಗಾ ಕರೋಡ್‌ಪತಿ’ ಸೀಸನ್ 12ರ ಆಡಿಷನ್ ಮೇ 9ರಿಂದ 23ರವರೆಗೆನಡೆಯುವ ಮಾಹಿತಿ ಇದೆ. ಆದರೆ ದೇಶದಾದ್ಯಂತ ‘ಲಾಕ್‌ಡೌನ್ 3.0’ ಮುಂದುವರಿದಿರುವುದರಿಂದ, ಈ ರಿಯಾಲಿಟಿ ಷೋ ಹೇಗೆ ಆಯೋಜಿಸುತ್ತಾರೋ ಎಂಬುದು ಎಲ್ಲರ ಪ್ರಶ್ನೆ.ಇದಕ್ಕೆ ಅಮಿತಾಭ್ ಅವರ ಬಳಿಯೂ ಉತ್ತರವಿಲ್ಲ. ‘ಇದಕ್ಕೆ ಕೆಬಿಸಿ ತಂಡ ಉತ್ತಮ ಮಾರ್ಗವನ್ನು ಕಂಡುಕೊಳ್ಳುತ್ತದೆ’ ಎಂದು ಅವರು ಚುಟುಕಾಗಿ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.