ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣಯ್ಯ‘ ಧಾರಾವಾಹಿಯು 400 ಸಂಚಿಕೆಗಳನ್ನು ಪೂರೈಸಿದೆ. ಈ ಕುರಿತು ಧಾರಾವಾಹಿ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಮಾರಿಗುಡಿ ಶಿವಣ್ಣನು ತಂಗಿಯರ ಬದುಕಿಗಾಗಿ ಸದಾ ಶ್ರಮಿಸುತ್ತಿರುತ್ತಾನೆ. ತನ್ನ ಮೂವರು ತಂಗಿರಾದ ರತ್ನಾ, ರಶ್ಮಿ, ರಾಣಿ, ರಮ್ಯಾ ಇವರನ್ನು ಅಮ್ಮನ ನೆರಳಿಲ್ಲದೆ ಸಾಕಿ, ವಿದ್ಯಾಭ್ಯಾಸ ನೀಡಿರುತ್ತಾನೆ. ಸದ್ಯ, ಶಿವು ಕೂಡ ಪಾರ್ವತಿಯನ್ನು ವಿವಾಹ ಆಗಿರುತ್ತಾನೆ. ಅಲ್ಲದೆ, ಇಬ್ಬರು ತಂಗೀರಾದ ರಶ್ಮಿ, ರಾಣಿಗೆ ವಿವಾಹ ಮಾಡಿಸಿರುತ್ತಾನೆ. ರತ್ನಾ ವಿವಾಹಕ್ಕೆ ಸಜ್ಜಾಗಿದ್ದಾಳೆ. ಚಿಕ್ಕವಳಾಗಿರುವ ರಮ್ಯಾ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಕುಟುಂಬದ ಬಂಧ ಬೆಸೆಯುವ ಈ ಧಾರಾವಾಹಿಯು ಸದ್ಯ, 400 ಸಂಚಿಕೆಗಳನ್ನು ಪೂರೈಸಿದೆ.

ಹಳ್ಳಿಕಥೆ ಹೊಂದಿರುವ ‘ಅಣ್ಣಯ್ಯ’ ಧಾರಾವಾಹಿಯನ್ನು ಉತ್ತಮ್ ಮಧು ಅವರ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಪತ್ನಿ ಸುಪ್ರೀತಾ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.

ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್, ರಶ್ಮಿ ಪಾತ್ರದಲ್ಲಿ ಪ್ರತೀಕ್ಷಾ ಶೀನಾಥ್, ರತ್ನಾಳಾಗಿ ನಾಗಶ್ರೀ, ರಾಣಿ ಪಾತ್ರದಲ್ಲಿ ರಾಘವಿ ಸೇರಿದಂತೆ ಅನೇಕರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.