ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಕಿಚ್ಚನ ಪಂಚಾಯಿತಿ: ಈ ವಾರ ಮನೆಯಿಂದ ಹೊರಕ್ಕೆ ಹೋಗುವವರು ಯಾರು?

Published 2 ಡಿಸೆಂಬರ್ 2023, 8:00 IST
Last Updated 2 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಹೊಸ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಗೆ ಬಂದ ಇಬ್ಬರು ಸ್ಪರ್ಧಿಗಳಿಂದ ಮನೆಯಲ್ಲಿ ಕೊಂಚ ಬದಲಾವಣೆಯ ಗಾಳಿ ಬೀಸಿದೆ.

ಈ ವಾರ ಆಟದ ಜತೆಗೆ ನಾಮಿನೇಷನ್‌ ಬಿಸಿ ಕೂಡ ಸ್ಪರ್ಧಿಗಳಿಗೆ ತಟ್ಟಿದೆ. ಹಾಗಾದರೆ ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಚರ್ಚೆ ಜೋರಾಗಿದೆ.

ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಆಟಗಾರರ ಮಧ್ಯೆ ಬಿರುಕು ಮೂಡುತ್ತಿದೆ. ಟಾಸ್ಕ್‌ಗಳಲ್ಲಿ ಉಂಟಾದ ವೈಮನಸ್ಸು ಮನೆಯ ಇತರ ಚಟುವಟಿಕೆಗಳಲ್ಲಿಯೂ ಮುಂದುವರೆಯುತ್ತಿದೆ.

ಕಳಪೆ ಹಾಗೂ ಉತ್ತಮ ಆಟಗಾರರ ಮಧ್ಯೆ ಮನೆಯಲ್ಲಿ ಉಳಿದುಕೊಳ್ಳುವುದು ಯಾರು ಎಂಬ ಚಿಂತೆ ಸ್ಪರ್ಧಿಗಳಲ್ಲಿ ಕಾಡುತ್ತಿದೆ

ಈ ವಾರ ಮನೆಯಲ್ಲಿ:

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಂದ ಪವಿ ಪೂವಪ್ಪ ಹಾಗೂ ಅವಿನಾಶ್‌ ಅವರು ಹೊರಗಡೆಯಿಂದ ತಾವು ನೋಡಿದ ಸ್ವರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮನೆಯಲ್ಲಿ ಪರ ವಿರೋಧ ಚರ್ಚೆಗಳು ನಡೆದವು.

ಈ ನಡುವೆ ತನಿಷಾ ಅವರ ಕಾಲಿಗೆ ಗಾಯವಾಗಿದ್ದರಿಂದ ಅವರ ಆಟವನ್ನು ನಮ್ರತಾ ಅವರು ಆಡುವ ಮೂಲಕ ಅವರ ಮಧ್ಯೆ ಇದ್ದ ಮನಸ್ತಾಪ ಶಮನಗೊಂಡಿದೆ.

ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಅವಿನಾಶ್‌ ಅವರನ್ನು ಹೊರಗಿಡಲು ಮನೆಮಂದಿ ಎಲ್ಲಾ ‘ನೀವು ಹೊಸದಾಗಿ ಮನೆಗೆ ಆಗಮಿಸಿದ್ದೀರಿ‘ ಎಂಬ ಒಂದೇ ಕಾರಣ ನೀಡಿದ್ದರು.

ಮನಸ್ಸಿನಲ್ಲಿ ಇರುವ ಮರೆಯಲಾರದ ಘಟನೆಯೊಂದನ್ನು ಹಂಚಿಕೊಳ್ಳುವ ಟಾಸ್ಕ್‌ನಲ್ಲಿ ವರ್ತೂರ್‌ ಸಂತೋಷ್‌ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದರು.

ಈ ವಾರದ ಕಳಪೆ ಪ್ರದರ್ಶನ ಪ್ರತಾಪ್‌ಗೆ ಸಿಕ್ಕಿದೆ ಹಾಗೂ ಉತ್ತಮ ಆಟಗಾರರ ಪ್ರಶಸ್ತಿ ನಮ್ರತಾಗೆ ಸಿಕ್ಕಿದೆ

ನಾಮಿನೇಷನ್‌

ವರ್ತೂರ್‌ ಸಂತೋಷ್‌, ಸ್ನೇಹಿತ್‌, ಪ್ರತಾಪ್‌, ತನಿಷಾ, ವಿನಯ್‌, ನಮ್ರತಾ ಗೌಡ, ಮೈಕಲ್ ಹಾಗೂ ಸಂಗೀತಾ ಶೃಂಗೇರಿ ಈ ವಾರ ನಾಮಿನೇಷನ್‌ನಲ್ಲಿ ಇರುವ ಸ್ಪರ್ಧಿಗಳು

ಸ್ಪರ್ಧಿಗಳ ನಡುವೆ ಆಟದ ಕಾವು ಹೆಚ್ಚಾಗುತ್ತಿದಂತೆ ಮನೆಯಿಂದ ಯಾರೂ ಹೊರಗೆ ಬರುತ್ತಾರೆಂಬ ಕುತೂಹಲವು ಅಭಿಮಾನಿಗಳಲ್ಲಿ ಮೂಡಿದೆ

ಕಳೆದ ವಾರ ನೀತು ವನಜಾಕ್ಷಿ ಅವರು ಬಿಗ್‌ಮನೆಯಿಂದ ಹೊರ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT