ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10 | ಮನೆ ಸದಸ್ಯರ ಜಟಾಪಟಿಗೆ ಕಾರಣವಾಯಿತು ಲಕ್ಷುರಿ ಬಜೆಟ್‌ ಖರೀದಿ!

Published 22 ಡಿಸೆಂಬರ್ 2023, 6:51 IST
Last Updated 22 ಡಿಸೆಂಬರ್ 2023, 6:51 IST
ಅಕ್ಷರ ಗಾತ್ರ

ಬೆಂಗಳೂರು: ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಖರೀದಿ, ಮಾರಾಟದ ವ್ಯವಹಾರ ಹೆಚ್ಚು ಸದ್ದು ಮಾಡಿತ್ತು. ವಾರಾಂತ್ಯದಲ್ಲಿ ಈ ಖರೀದಿ, ಮಾರಾಟದ ವ್ಯವಹಾರ ಹೊಸದೊಂದು ಮಜಲು ತಲುಪಿದೆ. ಇಷ್ಟು ದಿನ ವ್ಯಕ್ತಿಗಳನ್ನು ಖರೀದಿಸುವ ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಹೊಸದೊಂದು ಆಯ್ಕೆಯನ್ನು ನೀಡಿದೆ.

ಹೌದು, ಈ ವಾರದ ಅಂತ್ಯದಲ್ಲಿ ಬಿಗ್‌ಬಾಸ್‌ ಮನೆ ಸದಸ್ಯರಿಗೆ ಲಕ್ಷುರಿ ಬಜೆಟ್‌ ಖರೀದಿಸುವ ಅವಕಾಶ ನೀಡಿದೆ. ಆದರೆ, ದಿನಸಿ ವಸ್ತುಗಳನ್ನು ಮನೆ ಮಂದಿ ತಮ್ಮ ಬಳಿ ಇರುವ ಹಣದಿಂದ ಖರೀದಿಸಬೇಕಾಗಿದೆ. ಸದ್ಯ ಈ ಲಕ್ಷುರಿ ಬಜೆಟ್‌ ಮನೆ ಸ್ಪರ್ಧಿಗಳ ಜಗಳಕ್ಕೆ ಕಾರಣವಾಗಿದೆ.

ಯಾರ ಬಳಿ ಇರುವ ಹಣವನ್ನು ನೀಡಿ ದಿನಸಿಯನ್ನ ಖರೀದಿಸಬೇಕು ಎಂಬ ಪ್ರಶ್ನೆ ಮನೆ ಮಂದಿಯಲ್ಲಿ ಭಿನ್ನಾಭಿಪ್ರಾಯವನ್ನು ಮೂಡಿಸಿದೆ. ಈ ಕುರಿತು ಮಾತನಾಡಿರುವ ವಿನಯ್‌, ‘ಲೀಡರ್‌ಗಳ ಬಳಿ ಜಾಸ್ತಿ ಹಣವಿದೆ’ ಎಂದು ಹೇಳಿದ್ದಾರೆ. ಇದಕ್ಕೆ, ಸಂಗೀತಾ ‘ಅರ್ಧ ಅರ್ಧ ಶೇರ್‌ ಮಾಡಿಕೊಳ್ಳೋಣ’ ಎಂದು ತನಿಷಾ ಬಳಿ ಕೇಳಿದ್ದಾರೆ. ಆದರೆ ತನಿಷಾ ಅವರು ಇದಕ್ಕೆ ಒಪ್ಪಿಕೊಂಡಿಲ್ಲ. ‘ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು’ ಎಂದು ವಾದ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿರುವ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಜಗಳ ನಡೆದಿದೆ. ಮನೆಯ ಸದಸ್ಯರ ಈ ಜಟಾಪಟಿಯಿಂದ ಲಕ್ಷುರಿ ಬಜೆಟ್‌ ಅನ್ನು ಕಳೆದುಕೊಳ್ಳುತ್ತಾರಾ, ಯಾರ ಹಣದಲ್ಲಿ ಲಕ್ಷುರಿ ಬಜೆಟ್‌ ಮನೆಗೆ ಬರುತ್ತದೆ ಎಂಬ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯನ್ನು ಕಾದು ನೋಡಬೇಕಿದೆ.

ಬಿಗ್‌ಬಾಸ್‌ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT