ಮಂಗಳವಾರ, ಏಪ್ರಿಲ್ 13, 2021
32 °C

Big Boss 8: ಇಂದು ಮತ್ತೊಬ್ಬ ಸ್ಪರ್ಧಿ ಹೊರಕ್ಕೆ, ಸೇಫ್ ಆದವರು ಯಾರು ಗೊತ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರ ಹೋಗುವ ಕಾಲ ಸನ್ನಿಹಿತವಾಗಿದೆ. ನಾಮಿನೇಟ್ ಆಗಿದ್ದ 8 ಮಂದಿಯಲ್ಲಿ ಮೂವರು ವೀಕ್ಷಕರ ಮತದಿಂದ ಸೇಫ್ ಆಗಿದ್ದಾರೆ ಎಂದು ಶನಿವಾರ ಕಿಚ್ಚ ಸುದೀಪ್ ಘೊಷಿಸಿದ್ದು, ಇನ್ನುಳಿದ ನಾಮಿನೇಟ್ ಆದ ಐವರಲ್ಲಿ ಹೊರ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.

ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಶುಭಾ ಪೂಂಜಾ, ಚಂದ್ರಕಲಾ, ಪ್ರಶಾಂತ್ ಸಂಬರಗಿ, ಗೀತಾ, ವಿಶ್ವನಾಥ್ ಮತ್ತು ನಿರ್ಮಲಾ ಸೇರಿ 8 ಮಂದಿ ನಾಮಿನೇಟ್ ಆಗಿದ್ದರು. ಆದರೆ, ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್ ಅವರು ವೀಕ್ಷಕರ ಮತಗಳಿಂದ ಸೇಫ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಿಸಿದರು. 

ಇದನ್ನೂ ಓದಿ.. Big Boss 8: ‘ಹೊಲಸು ನಿದ್ದಿಯೋ, ನಿಧಿಯೋ?’:ತಪ್ಪಾಗಿ ಕೇಳಿಸಿಕೊಂಡು ಮಸಿ ಬಳಿದ ನಟಿ

ಉಳಿದ ಐವರಿಗೆ ಢವಢವ: ನಾಮಿನೆಟ್ ಆಗಿದ್ದ 8 ಮಂದಿಯಲ್ಲಿ ಮೂವರು ಸೇಫ್ ಆಗುತ್ತಿದ್ದಂತೆ ಇನ್ನುಳಿದ ಐವರಿಗೆ ಢವಢವ ಶುರುವಾಗಿದೆ. ನಿಮ್ಮಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗುವುದು ಖಚಿತ ಎಂದು ಹೇಳುವ ಮೂಲಕ ಸುದೀಪ್ ಭಾನುವಾರದ ಎಪಿಸೋಡ್‌ಗೆ ಕುತೂಹಲ ಹುಟ್ಟಿಸಿದ್ದಾರೆ. ಹಾಗಾಗಿ, ಚಂದ್ರಕಲಾ, ಪ್ರಶಾಂತ್ ಸಂಬರಗಿ, ಗೀತಾ, ವಿಶ್ವನಾಥ್ ಮತ್ತು ನಿರ್ಮಲಾ ಈ ಐವರಲ್ಲಿ ಒಬ್ಬರು ಭಾನುವಾರ ಗಂಟು ಮೂಟೆ ಕಟ್ಟಲಿದ್ದಾರೆ.

ಇದಕ್ಕೂ ಮುನ್ನ, ಈ ವಾರ ಮನೆಯಿಂದ ಯಾರು ಹೊರಹೋಗಬಹುದು ಎಂದು ಕಿಚ್ಚ ಸುದಿಪ್ ಕೇಳಿದ್ದ ಪ್ರಶ್ನೆಗೆ ಬಹುತೇಕರು ಗೀತಾ ಹೆಸರು ಹೇಳಿದ್ದರು. ನಿಧಿ ಸುಬ್ಬಯ್ಯ ಹೆಸರು ಸಹ ಕೇಳಿಬಂದಿತ್ತು. ಆದರೆ, ಶುಭಾ ಪೂಂಜಾ ಬಳಿಕ ಎರಡನೇ ಸ್ಪರ್ಧಿಯಾಗಿ ನಿಧಿ ಸೇಫ್ ಆಗುವ ಮೂಲಕ ಮನೆಯಲ್ಲಿ ಮುಂದುವರಿದಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು