ಭಾನುವಾರ, ಮೇ 16, 2021
22 °C

Big Boss 8: ಪ್ರಿಯಾಂಕಾ ಕಂಡು ಚಿಗುರೊಡೆಯಿತು ಶಮಂತ್ ಹಳೆಯ ಆಸೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಮನೆಗೆ ಇಬ್ಬರು ನಟಿಯರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಶಮಂತ್ ಆಸೆ ಮತ್ತೆ ಚಿಗುರೊಡೆದಿದೆ.

ಬಿಗ್ ಬಾಸ್ ಮನೆಯಲ್ಲಿ ಹುಡುಗಿಯೊಬ್ಬರನ್ನು ಒಲಿಸಿಕೊಳ್ಳುವ ಇಚ್ಛೆ ಹೊರಹಾಕಿದ್ದ ಶಮಂತ್ ಅದೇ ವಿಷಯಕ್ಕೆ ಮನೆಯ ಮಹಿಳಾ ಸದಸ್ಯರಿಂದ ದೂರಾಗಿದ್ದರು.

ಗೀತಾ ಬಿಚ್ಚಿಟ್ಟ ಸತ್ಯ: ಇಲ್ಲಿ ಒಬ್ವರನ್ನು ಪಟಾಯಿಸಿಕೊಂಡೇ ಹೋಗುವುದಾಗಿ ಶಮಂತ್ ನನ್ನ ಬಳಿ ಹೇಳಿದ್ದಾರೆ ಎಂದು ಮಾಜಿ ಸ್ಪರ್ಧಿ ಗೀತಾ ಅವರು ಸುದೀಪ್ ಬಳಿ ಹೇಳಿದ್ದರು. ಈ ಸಂದರ್ಭ ಬಯಲಾದ ಸತ್ಯ ಮನೆಯ ಹುಡುಗಿಯರೆಲ್ಲ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತ್ತು. ಆದರೆ, ಈಗ ಕಾಲ ಬದಲಾಗಿದೆ. ಶಮಂತ್ ಮೇಲಿದ್ದ ಅಭಿಪ್ರಾಯ ಬದಲಾಗಿದೆ. ಆದರೆ, ಮತ್ತೆರಡು ಹುಡುಗಿಯರು ಮನೆಗೆ ಬರುತ್ತಲೆ ಶಮಂತ್ ಹೊಸ ಗೇಮ್ ಶುರು ಮಾಡಿದ್ದಾರೆ.

ನಾಚಿ ನೀರಾಗಿದ್ದ ಪ್ರಿಯಾಂಕಾ ತಿಮ್ಮೇಶ್  ಅವರನ್ನು ಇಂಪ್ರೆಸ್ ಮಾಡಲು ಯತ್ನ?: ಬಿಗ್ ಬಾಸ್ ಮನೆಗೆ ಎರಡು ದಿನಗಳ ಹಿಂದಷ್ಟೇ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಪ್ರವೇಶಿಸುವ ವೇಳೆ ಮನೆಯ ಸದಸ್ಯರ ಹಳೆಯ ಬೇಡಿಕೆ ಪೂರೈಸಲು ಚಿಕನ್ ಸಹ ತಂದಿದ್ದರು. ಇದೇ ಸಂದರ್ಭ, ಹಾಸ್ಯ ಚಟಾಕಿ ಹಾರಿಸಿದ್ದ ಶಮಂತ್, ಚಿಕನ್ ಜೊತೆ ಚಿಕ್ಕೂ ಸಹ ಬಂದಿತು ಎಂದಿದ್ದರು. ಈ ಮಾತಿಗೆ ಮನೆಯವರ ಪ್ರತಿಕ್ರಿಯೆ ಕಂಡು ಪ್ರಿಯಾಂಕಾ ನಾಚಿ ನೀರಾಗಿದ್ದರು.

ಕಿಚನ್ನಲ್ಲಿ ಲವ್ ಕುಕಿಂಗ್: ಇನ್ನು, ಕಿಚನ್ನಿನಲ್ಲಿ ಚಪಾತಿ ಮಾಡುವ ವೇಳೆ ತಮ್ಮ ವಿಶಿಷ್ಟವಾದ ಪ್ರತಿಧ್ವನಿ ಶೈಲಿಯ ನ್ಯೂಸ್ ರೀಡ್ ಮಾಡುವ ಮೂಲಕ ಶಮಂತ್ ಗಮನ ಸೆಳೆದರು. ಚಿಕನ್ ಜೊತೆ ಪ್ರಿಯಂಕಾ ಅವರು ಎಂಟ್ರಿ ಕೊಟ್ಟಿದ್ದು ಹೇಗೆ ಎಂದು ವಿವರಿಸಿದರು. ಇದನ್ನು ಕೇಳಿದ ಪ್ರಿಯಾಂಕಾ ತಿಮ್ಮೇಶ್, ಇದೊಂಥರಾ ವಿಶಿಷ್ಟವಾಗಿದೆ. ನಾನೆಂದೂ ಈ ರೀತಿಯ ಕೌಶಲ್ಯ ನೋಡಿರಲಿಲ್ಲ ಎಂದರು. ಇದರಿಂದ ಹುಮ್ಮಸು ಪಡೆದ ಶಮಂತ್. ಹೌದಲ್ವಾ.. ನನ್ನ ತರಹ ಜಗತ್ತಲ್ಲಿ ಯಾರೂ ಇಲ್ಲ ಎಂದು ಇಂಪ್ರೆಸ್ ಮಾಡಲು ಯತ್ನಿಸಿದರು. ದಿವ್ಯಾ ಸುರೇಶ್ ಸೇರಿದಂತೆ ಇದನ್ನು ಗಮನಿಸಿದ ಮನೆಯ ಮಹಿಳಾ ಸದಸ್ಯರು ಓಹೋ ಶಮಂತ್ ಮತ್ತೆ ದಾರಿಗೆ ಬಂದಿದ್ದಾನೆ ಎಂದು ಗೇಲಿ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು