ಗುರುವಾರ , ಮೇ 13, 2021
40 °C

ಬಿಗ್‌ಬಾಸ್‌: ಈ ವಾರಾಂತ್ಯಕ್ಕೂ ಸುದೀಪ್‌ ಸಂಚಿಕೆಗಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಚೇತರಿಸಿಕೊಂಡಿದ್ದರೂ, ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ವಾರಾಂತ್ಯದ ಸಂಚಿಕೆಗಳನ್ನು ಸುದೀಪ್‌ ಅವರ ಅನುಪಸ್ಥಿತಿಯಲ್ಲೇ ನಡೆಸಲು ಕಲರ್ಸ್‌ ಕನ್ನಡ ನಿರ್ಧರಿಸಿದೆ. 

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಲರ್ಸ್‌ ಕನ್ನಡ, ‘ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಶನಿವಾರ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ’ ಎಂದು ತಿಳಿಸಿದೆ. 

ಕಳೆದೆರಡು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುದೀಪ್‌ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಎರಡು ದಿನಗಳ ಹಿಂದೆ ಟ್ವೀಟ್‌ ಮಾಡಿದ್ದ ಅವರು ‘ನಾನೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ’ ಎಂದಿದ್ದರು. ಈ ವಾರವೂ ಸಂಚಿಕೆಗಳ ಚಿತ್ರೀಕರಣ ರದ್ದುಗೊಳಿಸಿರುವುದರಿಂದ ಸತತ ಮೂರನೇ ವಾರ ಬಿಗ್‌ಬಾಸ್‌ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ ಸಂಚಿಕೆ ರದ್ದುಗೊಂಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು