ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada: ಬಿಗ್‌ಬಾಸ್‌ ಮನೆಗೆ ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿ!

Published 20 ನವೆಂಬರ್ 2023, 6:58 IST
Last Updated 20 ನವೆಂಬರ್ 2023, 6:58 IST
ಅಕ್ಷರ ಗಾತ್ರ

ಬಿಗ್‌ಬಾಸ್ ಕನ್ನಡ 10ನೇ ಆವೃತ್ತಿಯ 6ನೇ ವಾರ ಡಬಲ್ ಎಲಿಮಿನೇಶನ್ ಆಗಿತ್ತು. ಕಿಚ್ಚನ ಜೊತೆ ನಡೆದ ಫ್ರೆಂಡ್‌ಷಿಪ್ ಪಂಚಾಯ್ತಿ, ಫೇಕ್‌, ಜೆನ್ಯೂನ್‌ ಚರ್ಚೆಯಲ್ಲಿ ಮುಳುಗಿದ್ದ ಮನೆಗೆ ಸ್ಪೆಷಲ್ ಎಂಟ್ರಿಯಾಗಿದೆ.

7ನೇ ವಾರ ಆರಂಭದ ಬೆಳ್ಳಂ ಬೆಳಿಗ್ಗೆ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮಜವಾದ ಸರ್‌ಪ್ರೈಸ್ ನೀಡಿದ್ದಾರೆ.

JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಈ ಸ್ಪೆಷಲ್‌ ಎಂಟ್ರಿಯ ಗ್ಲಿಂಪಸ್‌ ಇದೆ.

‘ಮುಂಡಾ ಮೋಚ್ತು’ ಎಂಬ ಶಬ್ದ ಬಿಗ್‌ಬಾಸ್‌ ಮನೆಯಲ್ಲಿ ಮೊಳಗಿದೆ. ಇದನ್ನು ಕೇಳಿದ ಮೇಲೆ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಎಂಟ್ರಿ ಕೊಟ್ಟವರು ಯಾರೆಂದು ನಿಮಗೆ ಗೊತ್ತಾಗಿರುತ್ತೆ. ಅವರೇ ಬ್ರಹ್ಮಾಂಡ ಗುರೂಜಿ.

ಬೆಳ್ಳಂ ಬೆಳಿಗ್ಗೆ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿದ್ದು, ಸ್ಪರ್ಧಿಗಳು ನೆಟ್ಟ ಕಣ್ಣು ನೆಟ್ಟಂತೆ ಒಂದೆಡೆ ನೋಡುತ್ತಿದ್ದಾರೆ. ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಲ್ಲಿ ಎಲ್ಲ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತಾ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದಾರೆ.

ಸದ್ಯಕ್ಕಂತೂ ಬ್ರಹ್ಮಾಂಡ ಗುರೂಜಿ ಎಂಟ್ರಿಯಿಂದ ಮನೆಯಲ್ಲಿ ನಗು ಕಾಣಿಸಿಕೊಂಡಿದೆ. ಆ ನಗು ಎಷ್ಟು ದಿನ ಎಂಬುದೇ ಈಗಿರುವ ಪ್ರಶ್ನೆ. ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರಿಗೆ ಏನೇನು? ಹೇಳುತ್ತಾರೆ? ಎಂಬ ಕುತೂಹಲ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT