ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಪಾಡಿಗೆ ನಾನಿದ್ದಿದ್ದೇ ತಪ್ಪು: ಮುಂದಿನವಾರ ಇವರೇ ಎಲಿಮಿನೇಟ್ ಎಂದ ಭಾಗ್ಯಶ್ರೀ

Published 20 ನವೆಂಬರ್ 2023, 7:53 IST
Last Updated 20 ನವೆಂಬರ್ 2023, 7:53 IST
ಅಕ್ಷರ ಗಾತ್ರ

ಬೆಂಗಳೂರು: ಭಾಗ್ಯಶ್ರೀ ಅವರ ಬಿಗ್‌ ಬಾಸ್ ಪಯಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು? ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು? ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್‌? ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ ಜೀಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ.

ನನ್ನ ಜೀವನದ ಹೊಸ ಅನುಭವವಿದು

ಬಿಗ್‌ಬಾಸ್‌ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್‌ ನೂರಕ್ಕೆ ನೂರು ಹಾಕಿದೀನಿ.

ಅಮ್ಮ ಅಂತ ಹತ್ತಿರ ಕರೆದು ದೂರ ಇಟ್ರು

ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ‘ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು.

ಫೇಕ್ ಅಂತ ಅನಿಸಿಕೊಂಡು ಫ್ರೆಂಡ್‌ಷಿಪ್ ಮಾಡುವ ಬದಲು, ಆಟವಾಡುವಾಗ ಎಲ್ಲರ ಜೊತೆ ಇದ್ದು, ಉಳಿದ ಟೈಮಲ್ಲಿ ನನ್ನ ಪಾಡಿಗೆ ನಾನು ಇದ್ರಾಯ್ತಲ್ವಾ ಅಂದ್ಕೊಳ್ತಿದ್ದೆ. ಆದರೆ, ಗುಂಪಲ್ಲೇ ಇದ್ದು ಆಡಬೇಕು. ಆಗ ಇನ್ನೊಂದಿಷ್ಟು ವಾರ ಇರ್ತಿದ್ದೆ ಅನ್ನೋದು ಖಂಡಿತ ಸುಳ್ಳು. ಆ ಥರ ನನಗೆ ಯಾವಾಗಲೂ ಅನಿಸಿಲ್ಲ.

ಇಲ್ಲಿ ಕೆಲವರು ಫೇಕ್‌ ಇದ್ದಾರೆ. ಇವರ ಎಮೋಷನ್ಸ್ ಫೇಕ್ ಅಂತ ಹೇಳ್ದಾಗ, ಸಿರಿಯವರು ನನ್ನನ್ನು ತುಂಬ ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರ ಬಳಿ ಹೋಗಿ ಶೇರ್ ಮಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನಾನು ಅವರ ಬಳಿ ರಾತ್ರಿ ಹೊತ್ತಲ್ಲಿ ಆಯುಷ್ ಬಗ್ಗೆ ಮಾತಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನನಗೆ ನನ್ನ ಮಗನ ತಬ್ಬಿಕೊಂಡು ಮಲಗೋದು ಮಿಸ್ ಮಾಡ್ಕೊಳ್ಳೋವಾಗ ಅವರನ್ನೇ ತಬ್ಬಿಕೊಂಡು ಮಲಗ್ತಿದ್ದೆ.

ದೀಪಾವಳಿ ಹಬ್ಬಕ್ಕೆ ಸರ್ಪೈಸ್‌ ಲೆಟರ್ ಬರತ್ತೆ ಅಂತ ಹೇಳಿದ್ರು. ಅದು ನನ್ನ ಮಗನ ಲೆಟರೇ ಇರತ್ತೆ ಅಂತ ಗೊತ್ತಿತ್ತು. ಮೊದಲ ಟಾಸ್ಕ್‌ನಲ್ಲಿ ನನಗೆ ಲೆಟರ್ ಬರಲ್ಲ ಅಂತ ಗೊತ್ತಾದಾಗ ನಾನು ತುಂಬ ಡಲ್ ಆಗಿಬಿಟ್ಟೆ. ಮರುದಿನ ನಾನು ಫುಲ್ ಸೈಲೆಂಟ್ ಆಗಿದ್ದಿದ್ದಂತೂ ನಿಜ.

ಸ್ನೇಹಿತ್‌ ಮಾತಿನಿಂದ ಬೇಸರ ಆಯ್ತು

ಬಿಗ್‌ಬಾಸ್ ಮನೆಯಲ್ಲಿ ಡಲ್ ಆಗಿ ಕೂತಿರೋದನ್ನೇ ಕೆಲವರು ಅಡ್ವಾಂಟೇಜ್ ತಗೋತಾರೆ. ಇವರು ಡಲ್ ಆಗಿದ್ದಾರೆ, ನಾಮಿನೇಟ್ ಮಾಡೋಣ, ಕಳಪೆ ಕೊಡೋಣ ಅಂತ ಶುರು ಮಾಡ್ತಾರೆ. ಆಗ ನಾನು ನೋವಿದ್ರೂ ಕೂಡ ಅದರಿಂದ ಹೊರಗೆ ಬರಲು ಟ್ರೈ ಮಾಡ್ತಿದ್ದೆ. ಆ ಥರ ಹೋಗಿ ಟ್ರೈ ಮಾಡಿದ್ದಕ್ಕೇ ಸ್ನೇಹಿತ್ ಡೇಟ್ ವಿಚಾರಕ್ಕೆ ಅಲ್ಲೊಂದು ಕ್ಲಾಶ್ ಆಯ್ತು. ನಾನೇನೋ ಆ ಲೆಟರ್ ಸಿಗಲಿಲ್ಲ ಎನ್ನುವ ನೋವನ್ನು ಮರೆಯೋದಕ್ಕೆ ಅಲ್ಲಿ ಹೋಗಿ ಮಾತಾಡಿದ್ದಕ್ಕೆ, ‘ನೀವೇನು ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೊಳ್ತಿದ್ದೀರಾ ಅಂತ ಮಾತು ಬಂತು. ಅದರಿಂದ ಮತ್ತೆ ಹರ್ಟ್ ಆದೆ.

ನನ್ನ ಪರ್ಸನಲ್ ಲೈಪ್‌ನಲ್ಲಿ ನಾನು ಆದಷ್ಟೂ ನೆಗೆಟೀವ್ ಜನರು, ಫೇಕ್‌ ಜನರು, ಫೇಕ್‌ ಮಾತುಗಳಿಂದ ದೂರ ಇರ್ತಿದ್ದೆ. ಅದು ಬಿಗ್‌ಬಾಸ್ ಮನೆಯಲ್ಲಿ ತುಂಬ ತೊಂದರೆಯಾಯ್ತು.

ಸುದೀಪ್ ಸರ್, ಥ್ಯಾಂಕ್ಯೂ ಸೋ ಮಚ್. ಎಲಿಮಿನೇಟ್ ಆದೆ ಅಂತ ಹೇಳಿದಾಗ ಎಲ್ಲೋ ಬೇಜಾರಾಗಿತ್ತು. ಆದರೆ ನೀವು ಲೆಟರ್ ಕೊಟ್ಟು, ಬಿಗ್‌ ಬಾಸ್‌ ಲೀವಿಂಗ್ ಏರಿಯಾನಲ್ಲಿ ಓದಿಸಿದಿರಲ್ಲಾ ಸರ್. ಎಷ್ಟು ಸಂತೋಷ ಆಗೋಯ್ತು ಅಂದ್ರೆ. ಎಲಿಮಿನೇಷನ್ ಅನ್ನೋದನ್ನು ಕೂಡ ಮರೆತು ಹೋಗ್ಬಿಡ್ತು. ಪ್ರತಿಯೊಬ್ಬರ ಭಾವನೆ ಅರ್ಥ ಮಾಡಿಕೊಂಡು ವೀಕೆಂಡ್ ಎಪಿಸೋಡ್‌ಗಳಲ್ಲಿ ಸ್ಪಂದಿಸ್ತೀರಲ್ಲಾ… ಯು ಆರ್‍‌ ದಿ ರಿಯಲ್ ಸ್ಟ್ರೆಂಥ್. ಎಲ್ಲ ಸ್ಪರ್ಧಿಗಳಿಗೂ!

ಮನೆಯಲ್ಲಿ ನನ್ನ ಪ್ರಕಾರ ನಾನು ಜೆನ್ಯೂನ್ ಆಗಿದ್ದೆ. ನನ್ನ ಬಿಟ್ಟರೆ ಇಶಾನಿ. ಅವರು ಎಷ್ಟೋ ಸಲ ಕೈ ಎತ್ತಿ, ಟಾಸ್ಕ್ ಮಾಡ್ತೀನಿ ಅಂತ ಹೇಳಿದಾಗಲೂ ಅವರನ್ನು ಯಾರೂ ಕನ್ಸೀಡರೇ ಮಾಡ್ತಿರ್ಲಿಲ್ಲ. ನಾನಾದ್ರೂ ಧೈರ್ಯ ಮಾಡಿ ಹೇಳುತ್ತಿದ್ದೆ. ಆದರೆ ಅವರು ಗಟ್ಟಿಯಾಗಿ ಹೇಳ್ತಾನೂ ಇರ್ಲಿಲ್ಲ. ಗಟ್ಟಿಯಾಗಿ ಹೇಳಿದಾಗಲೂ ಕೂಡ ಅವಳ ಮಾತು ಕೇಳುತ್ತಿರಲಿಲ್ಲ.

ಮನೆಯಲ್ಲಿ ಎಲ್ಲರೂ ಫೇಕ್‌!

ಮನೆಯೊಳಗೆ ಫೇಕ್‌ ಅಂತ ಒಬ್ರಿದ್ದಾರೆ ಅನ್ಸಲ್ಲ. ಕೆಲವು ಸಲ ನನಗೆ ಕಾರ್ತಿಕ್ ನೋಡಿದಾಗ ಫೇಕ್ ಅನಿಸುತ್ತದೆ. ಕೆಲವು ಸಲ ವಿನಯ್ ಫೇಕ್ ಅನಿಸುತ್ತದೆ. ಒಮ್ಮೆ ನನ್ನ ಕಡೆ ಬಂದು, ‘ಏನಾದ್ರೂ ಹೆಲ್ಪ್ ಕೇಳಿ. ನಾನಿರ್ತಿನಿ ಅಂತಿದ್ರು. ಆದರೆ ನಿಜವಾಗಲೂ ಹೆಲ್ಪ್ ಮಾಡುವ ಸಮಯದಲ್ಲಿ ನನಗೆ ಹೆಲ್ಪ್ ಮಾಡಲೇ ಇಲ್ಲ ಅವ್ರು.

ಟಾಪ್‌ ಫೈವ್‌ನಲ್ಲಿ ಮೈಕಲ್, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್, ಪ್ರತಾಪ್ ಇರ್ತಾರೆ ಅನ್ಸುತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್‍‌ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು. ಮುಂದಿನವಾರ ಎಲಿಮಿನೇಟ್ ಆಗಿರುವವರ ಜಾಗದಲ್ಲಿ ನನ್ನ ಪ್ರಕಾರ ನೀತು ಇರುತ್ತಾರೆ.

ಕಥಾಸಂಗಮ ಗೆದ್ದದ್ದು ಮರೆಯಲಾಗದ ನೆನಪು

ಬಿಗ್‌ಬಾಸ್‌ ಮನೆಯೊಳಗೆ ಜಿಯೋ ಸಿನಿಮಾದ ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ. ಜಿಯೊ ಸಿನಿಮಾ ಫನ್ ಫ್ರೈಡೆಯಲ್ಲಿ ಒಗಟು ಬಿಡಿಸಿದ್ದೂ ಒಂದು ಅದ್ಭುತ ನೆನಪು. ‘ಅಟ್ಟದ ಮೇಲೆ ಪುಟ್ಟಲಕ್ಷ್ಮೀ’ ಅಂದ ತಕ್ಷಣ ಬೊಟ್ಟು ಎಂದು ನೆನಪಾಯ್ತು. ಮನೆಯೊಳಗಿನ ಬೊಟ್ಟು ತರಲು ಓಡಿದೆ. ಮಧ್ಯದಲ್ಲಿಯೇ ಏನೋ ನೆನಪಾಯ್ತು. ನನ್ನ ಹಣೆಯಲ್ಲಿನ ಬೊಟ್ಟನ್ನೇ ತೆಗೆದು ಇಟ್ಟುಬಿಟ್ಟೆ. ಎಲ್ಲರೂ ಅಚ್ಚರಿಪಟ್ಟರು. ಅದೂ ಖುಷಿಕೊಟ್ಟಿತು.

ಬಿಗ್‌ಬಾಸ್‌ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿʼ ಎಂದಿದ್ದಾರೆ ಭಾಗ್ಯಶ್ರೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT