ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಬಂದು ನಿಂತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಸೇರಿ 20 ಸ್ಪರ್ಧಿಗಳಿದ್ದ ಮನೆಯಲ್ಲೀಗ ಐವರು ಫೈನಲಿಸ್ಟ್‌ಗಳಿದ್ದಾರೆ. ಇಂದು ಮತ್ತು ನಾಳೆ ಗ್ರ್ಯಾಂಡ್ ಫಿನಾಲೆಯ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಭಾನುವಾರ ರಾತ್ರಿ ಈ ಸೀಸನ್‌ನ ವಿನ್ನರ್ ಯಾರು ಎಂಬುದು ಬಹಿರಂಗಗೊಳ್ಳಲಿದೆ.

ಇಂದು ಸಂಜೆ 6 ಗಂಟೆಯಿಂದ ಫಿನಾಲೆಯ ಅದ್ದೂರಿ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ಇದಕ್ಕಾಗಿ ಭವ್ಯ ವೇದಿಕೆಯನ್ನೂ ಸಜ್ಜುಗೊಳಿಸಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಹೋಗಿರುವ ಮಾಜಿ ಸ್ಪರ್ಧಿಗಳು ಸೇರಿದಂತೆ ಫೈನಲಿಸ್ಟ್‌ಗಳು ಸಹ ಹಾಡು, ಕುಣಿತದ ಮೂಲಕ ಪ್ರೇಕ್ಷರನ್ನು ರಂಜಿಸಲಿದ್ದಾರೆ. ನಟಿಯರಾದ ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್ ಮತ್ತುರಾಜೀವ್, ಪ್ರಶಾಂತ್ ಸಂಬರಗಿ ಮತ್ತಿತರರು ಭರ್ಜರಿ ಡ್ಯಾನ್ಸ್ ಮಾಡಿದ್ದು, ವಿಶ್ವನಾಥ್ ತಮ್ಮ ಗಾನಸುಧೆ ಹರಿಸುವುದು ಪ್ರೊಮೊದಲ್ಲಿ ಬಹಿರಂಗವಾಗಿದೆ. ನಿರೂಪಕ ಸುದೀಪ್ ಗ್ರ್ಯಾಂಡ್ ಉಡುಪಿನಲ್ಲಿ ವೇದಿಕೆಗೆ ಎಂಟ್ರಿ ಕೊಡಲಿದ್ದಾರೆ.

ಸ್ಪರ್ಧಿಗಳು ಮನೆ ಬಿಟ್ಟು ವೇದಿಕೆಗೆ ಬರುವುದಕ್ಕೂ ಮುನ್ನ, ಮಾಜಿ ಸ್ಪರ್ಧಿಗಳು ಧ್ವನಿ ಸಂದೇಶದ ಮೂಲಕ ಫಿನಾಲೆಗೆ ಬಂದಿರುವ ಐವರು ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ.

ಫೈನಲ್ ಹಂತ ತಲುಪಿರುವ ಎಲ್ಲ ಐವರು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಗ್ರ್ಯಾಂಡ್ ಫಿನಾಲೆಯ ಎರಡನೇ ದಿನವಾದ ನಾಳೆ ರಾತ್ರಿ ಅಂತಿಮ ಹಂತಕ್ಕೆ ಇಬ್ಬರು ಸ್ಪರ್ಧಿಗಳು ಮಾತ್ರ ಉಳಿಯಲಿದ್ದು, ಸುದೀಪ್ ವಿನ್ನರ್ ಯಾರು ಎಂಬುದನ್ನು ಘೋಷಣೆ ಮಾಡಲಿದ್ದಾರೆ. ಕೆ.ಪಿ. ಅರವಿಂದ್, ಮಂಜು ಪಾವಗಡ ಮತ್ತು ವೈಷ್ಣವಿ ನಡುವೆ ಭಾರೀ ಪೈಪೋಟಿ ಇದ್ದು, ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಸಹ ಅಚ್ಚರಿಯ ಫಲಿತಾಂಶ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.