ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 9: ದೀಪಿಕಾ ಔಟ್– ಸುದೀಪ್ ‘ಹಾರಿಬಲ್ ಎಲಿಮಿನೇಶನ್’ಎಂದಿದ್ದು ಯಾಕೆ?

Last Updated 21 ನವೆಂಬರ್ 2022, 11:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ 9ನೇ ಆವೃತ್ತಿಯ 8ನೇ ವಾರ ನಟಿ ದೀಪಿಕಾ ದಾಸ್ ಅವರು ಮನೆಯಿಂದ ಹೊರ ಹೋಗಿದ್ದಾರೆ. ಹೀಗಾಗಿ, ಬಿಗ್ ಬಾಸ್ ಮನೆಯ ಸದಸ್ಯರ ಸಂಖ್ಯೆ ಈಗ 11ಕ್ಕೆ ಇಳಿದಿದೆ.

ಕಳೆದ 7 ವಾರಗಳಲ್ಲಿ ದೀಪಿಕಾ ದಾಸ್ ಅವರು ಮನೆಯಲ್ಲಿ ಅತ್ಯಂತ ಸಪ್ಪೆಯಾಗಿ ಕಾಣಿಸಿಕೊಂಡಿದ್ದರು. ಟಾಸ್ಕ್ ಮತ್ತು ಸದಸ್ಯರ ಜೊತೆ ಬೆರೆಯುವುದರಲ್ಲೂ ಹಿಂದೆ ಬಿದ್ದಿದ್ದರು. ಹಾಗಾಗಿ, ಪ್ರತಿ ವಾರ ಕೊನೆಯವರಾಗಿ ಸೇಫ್ ಆಗುತ್ತಿದ್ದರು. 8ನೇ ವಾರ ಅತ್ಯಂತ ಲವಲವಿಕೆಯಿಂದ ಟಾಸ್ಕ್‌ಗಳಲ್ಲಿ ಪಾಲ್ಗೊಂಡ ಅವರು ಭರವಸೆ ಮೂಡಿಸಿದ್ದರು. ಆದರೆ, ವೀಕ್ಷಕರು ಅವರ ಪರವಾಗಿ ಮತ ಹಾಕಿಲ್ಲ.

‘ಹಾರಿಬಲ್ ಎಲಿಮಿನೇಶನ್’

ಹೌದು, 7ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ 100ಕ್ಕೂ ಅಧಿಕ ದಿನಗಳ ಕಾಲ ಮನೆಯಲ್ಲಿ ಉಳಿದಿದ್ದರು. ಆದರೆ, ಈ ಬಾರಿ 56 ದಿನಕ್ಕೆ ಪಯಣ ಮುಗಿಸಿದ್ದಾರೆ. 9ನೇ ಆವೃತ್ತಿಗೆ ಎಂಟ್ರಿ ಪಡೆದಿದ್ದ 9 'ಪ್ರವೀಣ'ರಲ್ಲಿ ಒಬ್ಬರಾದ ದೀಪಿಕಾ ಈ ಬಾರಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ.

ಭಾನುವಾರದ ಸಂಚಿಕೆಯ ಎಲಿಮಿನೇಶನ್ ವೇಳೆ, ಅಂತಿಮವಾಗಿ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಮತ್ತು ದೀಪಿಕಾ ದಾಸ್ ಉಳಿದಿದ್ದರು. ನೀವು ಮೂವರು 'ಪ್ರವೀಣ'ರಾಗಿದ್ದು, ನಿಮ್ಮಲ್ಲಿ ಯಾರೇ ಎಲಿಮಿನೇಟ್ ಆದರೂ ಅದು ‘ಹಾರಿಬಲ್ ಎಲಿಮಿನೇಶನ್’ ಎಂದು ನಿರೂಪಕ ಸುದೀಪ್ ಹೇಳಿದರು. ಏಕೆಂದರೆ, ಮೂವರೂ ಈ ಹಿಂದಿನ ಸೀಸನ್‌ಗಳಲ್ಲಿ ಗಮನ ಸೆಳೆದಿದ್ದ ಸ್ಪರ್ಧಿಗಳು ಹಾಗೂ ಗೆಲುವಿನ ಸನಿಹಕ್ಕೆ ಬಂದವರಾಗಿದ್ದರು.

ಕಣ್ಣೀರಾದ ದಿವ್ಯಾ

ದೀಪಿಕಾ ಜೊತೆ ದಿವ್ಯಾ ಉರುಡುಗ ಸಹ ಈ ಆವೃತ್ತಿಯಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ, ಈ ಮೂವರಲ್ಲಿ ಯಾರು ಹೋಗಬಹುದು ಎಂಬ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಮನೆಯ ಸದಸ್ಯರಲ್ಲಿ ಬಹುತೇಕರು ದಿವ್ಯಾ ಕಡೆ ಬೊಟ್ಟು ಮಾಡಿದ್ದರು. ಈ ಸಂದರ್ಭ ಅತೀವ ದುಃಖ ವ್ಯಕ್ತಪಡಿಸಿದ ದಿವ್ಯಾ, ನನಗೆ ಇಷ್ಟವಿಲ್ಲದವರ ಜೊತೆ ಸುಮ್ಮ ಸುಮ್ಮನೆ ಬೆರೆಯಲು ನನಗೆ ಆಗುವುದಿಲ್ಲ. ನನಗೆ ಕಂಪರ್ಟ್ ಇಲ್ಲದ ಕಡೆ ಇರಲು ಸಾಧ್ಯವಿಲ್ಲ ಎಂದು ಜೋರಾಗಿ ಅಳುತ್ತಾ ಉತ್ತರಿಸಿದರು.

ದಿವ್ಯಾ ಅವರೇ ಮನೆಯ ಸದಸ್ಯರ ಅಭಿಪ್ರಾಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ಯಾಕೆಂದರೆ, ನಿಮ್ಮನ್ನ ಸೇಫ್ ಮಾಡಿದ್ದು, ಮನೆಯ ಸದಸ್ಯರಲ್ಲ. ಜನ ಎಂದು ಸುದೀಪ್ ಸಂತೈಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT