ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ 12ನೇ ವಾರ ಮನೆಯಿಂದ ಹೊರ ಹೋಗಲು 6 ಮಂದಿ ನಾಮಿನೇಟ್ ಆಗಿದ್ದಾರೆ.

ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಅನುಪಮಾ ಗೌಡ, ಆರ್ಯವರ್ಧನ್, ಅರುಣ್ ಸಾಗರ್ ಮತ್ತು ದೀಪಿಕಾ ದಾಸ್ ಮೇಲೆ ಈ ವಾರದ ಎಲಿಮಿನೇಶನ್ ತೂಗುಗತ್ತಿ ಇದೆ.

ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಅನುಪಮಾ ಗೌಡ, ಆರ್ಯವರ್ಧನ್, ದೀಪಿಕಾ ಅವರನ್ನು ಮನೆಯ ಸದಸ್ಯರೇ ನಾಮಿನೇಟ್ ಮಾಡಿದರು. ಅರುಣ್ ಸಾಗರ್ ಅವರನ್ನು ಕ್ಯಾಪ್ಟನ್ ರೂಪೇಶ್ ಶೆಟ್ಟಿ ತಮ್ಮ ನಾಯಕನ ವಿಶೇಷ ಅಧಿಕಾರ ಬಳಸಿ ನಾಮಿನೇಟ್ ಮಾಡಿದರು.

ಕಳೆದ ಹಲವು ವಾರಗಳಿಂದ ಕೊನೆಯವರಾಗಿ ಸೇವ್ ಆಗುತ್ತಿರುವ ದಿವ್ಯಾ ಉರುಡುಗ ಡೇಂಜರ್ ಸೈಡ್‌ನಲ್ಲಿ ಇದ್ದಾರೆ. ಈ ವಾರದ ಆಟಗಳು ಮತ್ತು ಮನೆಯ ಚಟುವಟಿಕೆಗಳಲ್ಲಿ ಗಮನ ಸೆಳೆಯದಿದ್ದರೆ ವೀಕ್ಷಕರ ಮತ ಬೀಳುವುದು ಕಷ್ಟ. ಇನ್ನುಳಿದ ಎಲ್ಲ ಸದಸ್ಯರು ಅತ್ಯಂತ ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ನಿರೂಪಕ ಕಿಚ್ಚ ಸುದೀಪ್ ಈ ವಾರ ಡಬಲ್ ಎಲಿಮಿನೇಶನ್ ಸೂಚನೆ ಕೊಟ್ಟಿದ್ದು, ಆ ಇಬ್ಬರು ಯಾರು ಎಂಬ ಕುತೂಹಲ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.