ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ಎರಡನೇ ವಾರದ ಎಲಿಮಿನೇಶನ್‌ನಲ್ಲಿ ಪತ್ರಕರ್ತ ಗೌರೀಶ್ ಅಕ್ಕಿ ಅವರು ಮನೆಯಿಂದ ಹೊರ ನಡೆದಿದ್ದಾರೆ.

ಗೌರೀಶ್ ಅಕ್ಕಿ, ತುಕಾಲಿ ಸಂತೋಷ್, ಕಾರ್ತಿಕ್, ಸಂಗೀತಾ, ತನಿಶಾ, ಭಾಗ್ಯಶ್ರೀ ಎರಡನೇ ವಾರ ಮನೆಯಿಂದ ಹೊರಹೋಗುವವರ ಪಟ್ಟಿಯಲ್ಲಿ ನಾಮಿನೇಟ್ ಆಗಿದ್ದರು. ಶನಿವಾರ ಪಂಚಾಯಿತಿಯಲ್ಲಿ ಹೆಚ್ಚು ವೋಟ್ ಪಡೆದ ತುಕಾಲಿ ಸಂತೋಷ್ ಎಲಿಮಿನೇಷನ್ ಬಾಣದಿಂದ ಮೊದಲು ತಪ್ಪಿಸಿಕೊಂಡಿದ್ದರು. ಅದಾದ ಬಳಿಕ ಕಾರ್ತಿಕ್ ಉಳಿದುಕೊಂಡಿದ್ದರು.

ಭಾನುವಾರ ಪಂಚಾಯಿತಿಯಲ್ಲಿ ಸಂಗೀತಾ ಮೊದಲು ಉಳಿದುಕೊಂಡರು, ನಂತರ ತನಿಶಾ ಎಲಿಮಿನೇಟ್ ಆಗುವುದರಿಂದ ಪಾರಾಗಿದ್ದರು. ಕೊನೆಯದಾಗಿ ಭಾಗ್ಯಶ್ರಿ ಮತ್ತು ಗೌರೀಶ್ ಉಳಿದುಕೊಂಡಿದ್ದರು. ಭಾಗ್ಯಶ್ರೀ ಅವರಿಗೆ ಇನ್ನೊಂದು ವಾರ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ದೊರೆತಿದ್ದು, ಗೌರೀಶ್ ಹೊರ ನಡೆದಿದ್ದಾರೆ.

ಮನೆಯಿಂದ ಹೊರ ನಡೆಯುವ ಮುನ್ನ ನೀತು ವನಜಾಕ್ಷಿಯವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಮೊದಲ ವಾರ ಬಿಗ್ ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್ ಹೊರ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.