ಶುಕ್ರವಾರ, ಸೆಪ್ಟೆಂಬರ್ 24, 2021
27 °C

Bigg Boss 8 : ಮನೆಗೆ ಬಂದಿತು ಕಿಚ್ಚ ಸುದೀಪ್ ಮಾಡಿದ ಅಡುಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಅಂತಿಮ ವಾರ ಮನೆ ಕಳೆಕಟ್ಟಿದೆ. ಉಳಿದಿರುವ ಆರು ಸ್ಪರ್ಧಿಗಳ ಈಡೇರದ ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಿದ್ದಾರೆ.

ಹೌದು, ಅರವಿಂದ್ ಕೆ.ಪಿಯವರು ತಾವು ಎಂಟ್ರಿ ಕೊಟ್ಟ ಬೈಕ್ ಗಾರ್ಡನ್ ಏರಿಯಾಗೆ ಬರಬೇಕೆಂದು ಕೇಳಿಕೊಂಡಿದ್ದರು. ಅದನ್ನು ಪೂರೈಸಿದ ಬಿಗ್ ಬಾಸ್ ಅರವಿಂದ ಅವರಿಗೆ ಖುಷಿ ನೀಡಿದರು. ಅದೇ ಹಾದಿಯಲ್ಲಿ ದಿವ್ಯಾ ಉರುಡುಗ ಆಸೆಯೂ ಈಡೇರಿದೆ.

ಸುದೀಪ್ ಅವರು ಮಾಡಿದ ಅಡುಗೆಯನ್ನು ಮನೆಯ ಸದಸ್ಯರೆಲ್ಲರೂ ಊಟ ಮಾಡಬೇಕು ಎಂದು ದಿವ್ಯಾ ಉರುಡುಗ ಬೇಡಿಕೆ ಇಟ್ಟಿದ್ದರು. ಹಾಗಾಗಿ, ಸುದೀಪ್ ಅವರು ತಾವೇ ತಯಾರಿಸಿದ ಅಡುಗೆಯನ್ನು ಮನೆಗೆ ಕಳುಹಿಸಿಕೊಟ್ಟಿರುವುದು ಪ್ರೊಮೋದಲ್ಲಿ ಕಂಡುಬಂದಿದೆ.

ಬಳಿಕ, ನೀವು ಇಷ್ಟಪಟ್ಟಹಾಗೆ ಅಡುಗೆ ಮಾಡಿ ಕಳುಹಿಸಿದ್ದೇನೆ ಎಂದು ಸ್ವತಃ ಸುದೀಪ್ ಅವರ ಧ್ವನಿ ಕೇಳಿಸಿದೆ. 

ಇದನ್ನೂ ಓದಿ.. Bigg Boss 8: ಫಿನಾಲೆಗೂ ಮುನ್ನ ಅಪರೂಪದ ಬೇಡಿಕೆ ಇಟ್ಟ ಮಂಜು ಪಾವಗಡ

ಅಷ್ಟೇ ಅಲ್ಲ, ‘ಡಿಯು ಅವರೆ ಕೇಳಿದ್ರಿ ಊಟ. ಪ್ರೀತಿಯಿಂದ ತಿನ್ನುತ್ತ ಸ್ವಲ್ಪಹೊತ್ತಾದರೂ ಬಿಡಿ ಅರವಿಂದ್ ಮೇಲಿನ ನೋಟ’ ಎಂದು ಬರೆದು ಕಳುಹಿಸಿದ್ದಾರೆ.

ತಮ್ಮ ಬೇಡಿಕೆ ಪೂರೈಸಿದ ಸುದೀಪ್ ಅವರಿಗೆ ಮನೆಯ ಸದಸ್ಯರೆಲ್ಲರೂ ಧನ್ಯವಾದ ಹೇಳಿದ್ದಾರೆ.

ಟಾಸ್ಕ್‌ಗಳಲ್ಲಿ ದಿವ್ಯಾ ಸುರೇಶ್–ಅರವಿಂದ್ ಪೈಪೋಟಿ: ₹2 ಲಕ್ಷ ಗೆಲ್ಲುವ ಟಾಸ್ಕ್‌ಗಳಿಂದಾಗಿ ಮನೆಯಲ್ಲಿ ಆಟ ರೋಚಕತೆ ಪಡೆದುಕೊಂಡಿದೆ. ಮರದ ಕಾಲಿನಿಂದ ನಡೆಯುವ ಟಾಸ್ಕ್‌ನಲ್ಲಿ ಅರವಿಂದ್ ಮೊದಲ ಸ್ಥಾನ ಪಡೆದು 5 ಅಂಕ ಗಳಿಸಿದರೆ ದಿವ್ಯಾ ಸುರೇಶ್ ಅವರಿಗೆ 3 ಅಂಕ ಸಿಕ್ಕಿತು. ಮನೆಯ ಸದಸ್ಯರ ಬಾಲ್ಯಾವಸ್ಥೆಯ ಚಿತ್ರ ನೋಡಿ ಗುರುತಿಸುವ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ದಿವ್ಯಾ ಸುರೇಶ್ 5 ಅಂಕ ಪಡೆದುಕೊಂಡರು. ಹೀಗಾಗಿ, ಇವರಿಬ್ಬರ ಅಂಕಗಳು ತಲಾ 8 ಆಗಿದ್ದು, ಸಮಬಲ ಸಾಧಿಸಿದ್ದಾರೆ. ಎರಡನೇ ಟಾಸ್ಕ್‌ನಲ್ಲಿ 5 ಅಂಕ ಗಳಿಸಿದ ಪ್ರಶಾಂತ್ ಸಂಬರಗಿ ಸಹ ನಂತರದ ಸ್ಥಾನದಲ್ಲಿದ್ದಾರೆ.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು