ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಕೀ ಕಳೆದುಕೊಂಡ ಉರುಡುಗ.. ಪ್ರಶಾಂತ್ ಸಂಬರಗಿ ಜೈಲಲ್ಲೇ ಲಾಕ್?

ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಂತಿಮ ಘಟ್ಟ ತಲುಪುತ್ತಿದೆ. ಹೀಗಾಗಿ, ಟಾಸ್ಕ್ ಮತ್ತು ಎಲಿಮಿನೇಶನ್ ಎರಡರಲ್ಲೂ ಬಿಗ್ ಬಾಸ್ ಟ್ವಿಸ್ಟ್ ನೀಡುತ್ತಿದ್ದಾರೆ. ಈ ಮಧ್ಯೆ, ಈ ವಾರ ಮನೆಯಿಂದ ಹೊರಹೋಗುವ ಸಾಲಿನಲ್ಲಿ 5 ಮಂದಿ ಇದ್ದಾರೆ.

ಶಮಂತ್, ದಿವ್ಯಾ ಉರುಡುಗ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ ಮತ್ತು ಪ್ರಿಯಾಂಕಾ ಅವರಿಂದ ನೇರವಾಗಿ ನಾಮಿನೇಟ್ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರು ಈ ವಾರ ಎಲಿಮಿನೇಶನ್ ಪರೀಕ್ಷೆ ಎದುರಿಸುತ್ತಿದ್ದಾರೆ.

ದಿವ್ಯಾ ಉರುಡುಗ ಮತ್ತೆ ಮನೆಯ ಕ್ಯಾಪ್ಟನ್ ಅಗಿದ್ದರೂ ಸಹ ಅವರಿಗೆ ಮುಂದಿನ ವಾರ ಇಮ್ಯುನಿಟಿ ಸಿಗಲಿದೆ. ಹಾಗಾಗಿ, ಅವರು ಈ ವಾರದ ಎಲಿಮಿನೇಶನ್ ಪರೀಕ್ಷೆ ಎದುರಿಸಲೇಬೇಕಿದೆ.

ಈ ಮಧ್ಯೆ, ಈ ವಾರ ಕಳಪೆ ಪಟ್ಟ ಹೊತ್ತು ಪ್ರಶಾಂತ್ ಸಂಬರಗಿ ಜೈಲು ಸೇರಿದ್ದರು. ಮನೆಯ ಕ್ಯಾಪ್ಟನ್ ಬಳಿ ಜೈಲಿನ ಕೀ ಇರುತ್ತದೆ. ಕ್ಯಾಪ್ಟನ್ ದಿವ್ಯ ಉರುಡುಗ ಕೀ ಕಳೆದುಕೊಂಡು ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದೆ. ಇದನ್ನರಿತ ಪ್ರಶಾಂತ್ ಬಾಗಿಲು ತೆರೆಯುವಂತೆ ಕೂಗಾಡಿದ್ದಾರೆ. ಶುಕ್ರವಾರ ಮನೆಯಲ್ಲಿ ಮುಂದೇನಾಯ್ತು ಎಂಬುದರ ಚಿತ್ರಣ ಇಂದಿನ ವೀಕೆಂಡ್ ಎಪಿಸೋಡ್‌ನಲ್ಲಿ ಸಿಗಲಿದೆ.

ಮುಂದಿನ ವಾರಕ್ಕೂ ಶುಭಾ ನಾಮಿನೇಟ್: ಬಿಗ್ ಬಾಸ್ ಈ ಹಿಂದೆಯೇ ತಿಳಿಸಿದಂತೆ ಟಾಸ್ಕ್‌ಗಳಲ್ಲಿ ಅತಿ ಕಡಿಮೆ ಅಂಕ ಪಡೆದಿರುವ ಶುಭಾ ಪೂಂಜಾ ಮುಂದಿನವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದಾರೆ. ತಮ್ಮಲ್ಲಿದ್ದ ಮುತ್ತುಗಳನ್ನು ಅರವಿಂದ್ ಅವರಿಗೆ ಕೊಟ್ಟ ಶುಭಾ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನೇ ನಿನಗೆ ಮುತ್ತುಗಳನ್ನು ಕೊಡುತ್ತಿದ್ದೆ ಎಂದು ಮಂಜು ಪಾವಗಡ ಹೇಳಿದಾಗ, ನಾನೇ ಗೆದ್ದು ಬರಬೇಕು ಎಂದು ಗೊಣಗಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT