ಶುಕ್ರವಾರ, ಜನವರಿ 27, 2023
17 °C

BBK9: ನಾಮಿನೇಶನ್‌ನಿಂದ ತಪ್ಪಿಸಿಕೊಂಡ ಲಕ್ಕಿ ರಾಜಣ್ಣ, ಸಂಬರಗಿಗೆ ಶಾಕ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ 10ನೇ ವಾರ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಈ ನಡುವೆ ಮನೆಯ 9 ಸದಸ್ಯರು ಹೊರಹೋಗಲು ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ರಾಕೇಶ್ ಅಡಿಗ ಮತ್ತು ರೂಪೇಶ್ ರಾಜಣ್ಣ ಮಾತ್ರ ಸೇಫ್ ಆಗಿದ್ದಾರೆ.

ಲಕ್ಕಿ ರಾಜಣ್ಣ, ಅನ್‌ಲಕ್ಕಿ ಪ್ರಶಾಂತ್..

ಈ ಬಾರಿಯ ನಾಮಿನೇಶನ್‌ಗೆ ಬಿಗ್ ಬಾಸ್ ಹೊಸ ಉಪಾಯ ಮಾಡಿದ್ದರು. ಮನೆಯ ಸದಸ್ಯರನ್ನು ಇಬ್ಬಿಬ್ಬರಂತೆ ತಂಡಗಳಾಗಿ ವಿಂಗಡಿಸಿ ಸೌಂಡ್ ಪ್ರೂಫ್ ಕೊಠಡಿಗೆ ಹಾಕಿದ್ದರು. ಅವರಿಗೆ ಹೆಡ್‌ಫೋನ್ ಹಾಕಿ ನಿಲ್ಲಿಸಲಾಗಿತ್ತು. ಇಬ್ಬರಿಗೂ ಅವರಿಬ್ಬರ ಚಿತ್ರಗಳನ್ನು ನೀಡಲಾಗಿತ್ತು. ಯಾರು ಸೇಫ್ ಆಗಬೇಕೆಂದು ಸ್ಪರ್ಧಿಗಳು ಚಿತ್ರ ತೋರಿಸಬೇಕಿತ್ತು. ಇಬ್ಬರೂ ತೋರಿಸಿದ ಚಿತ್ರ ಒಂದೇ ಆಗಿದ್ದರೆ ಚಿತ್ರದಲ್ಲಿರುವ ವ್ಯಕ್ತಿ ಸೇಫ್ ಆಗುತ್ತಿದ್ದರು. ಇಬ್ಬರೂ ಬೇರೆ ಬೇರೆ ಚಿತ್ರಗಳನ್ನು ತೋರಿಸಿದರೆ ಇಬ್ಬರೂ ನಾಮಿನೇಟ್ ಆಗುವ ನಿಯಮವಿತ್ತು.

ಈ ಸಂದರ್ಭ ಪ್ರಶಾಂತ್ ಸಂಬರಗಿ ಮತ್ತು ದೀಪಿಕಾ ದಾಸ್ ಇಬ್ಬರೂ ಸಂಬರಗಿ ಅವರ ಚಿತ್ರವನ್ನು ತೋರಿಸಿದ್ದರು. ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ, ರಾಜಣ್ಣ ಅವರ ಚಿತ್ರ ತೋರಿಸಿದ್ದರು. ಉಳಿದೆಲ್ಲ ತಂಡಗಳ ಸದಸ್ಯರು ಬೇರೆ ಚಿತ್ರಗಳನ್ನು ತೋರಿಸಿದ್ದರು. ಹೀಗಾಗಿ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ಸೇಫ್ ಆಗಿದ್ದರು.  

ಆದರೆ, ಪ್ರಶಾಂತ್ ಸಂಬರಗಿ ಹಣೆಬರಹ ಹೇಗಿತ್ತೆಂದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹೌದು, ರಾಕೇಶ್ ಅಡಿಗ ಅವರು ಕ್ಯಾಪ್ಟನ್‌ಗೆ ಬಿಗ್ ಬಾಸ್ ನೀಡಿದ್ದ ವಿಶೇಷ ಅಧಿಕಾರ ಬಳಸಿಕೊಂಡು ಸೇಫ್ ಆಗಿದ್ದ ಪ್ರಶಾಂತ್ ಸಂಬರಗಿ  ಅವರನ್ನು ಮತ್ತೆ ನಾಮಿನೇಟ್ ಮಾಡಿದರು. ಹೀಗಾಗಿ, ಈ ವಾರ ರಾಕೇಶ್ ಅಡಿಗ ಮತ್ತು ರೂಪೇಶ್ ರಾಜಣ್ಣ ಮಾತ್ರ ಸೇಫ್ ಆಗಿ ಉಳಿದುಕೊಂಡರು. ಉಳಿದ ಸದಸ್ಯರೆಲ್ಲ ನಾಮಿನೇಟ್ ಆಗಿದ್ದಾರೆ.

ನಾಮಿನೇಟ್ ಆಗಿರುವ ಸದಸ್ಯರು: ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಕಾವ್ಯಾ ಗೌಡ, ಅರುಣ್ ಸಾಗರ್, ಆರ್ಯವರ್ಧನ್, ದೀಪಿಕಾ ದಾಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು