ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಟಾಸ್ಕ್‌ ವಿಷಯದಲ್ಲಿ ತಾರತಮ್ಯ ನಡೆಯುತ್ತಿದೆ ಎಂದ ಸಂಗೀತಾ

Published 3 ಜನವರಿ 2024, 5:49 IST
Last Updated 3 ಜನವರಿ 2024, 5:49 IST
ಅಕ್ಷರ ಗಾತ್ರ

ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತಾರತಮ್ಯದ ಬಗ್ಗೆ ಚರ್ಚೆ ಆರಂಭವಾಗಿದ್ದು, ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಇಂದು ಬಿಡುಗಡೆಗೊಂಡ ಪ್ರೊಮೊದಲ್ಲಿ ಸಂಗೀತಾ ಮತ್ತು ವಿನಯ್ ಅವರ ನಡುವೆ ಟಾಸ್ಕ್‌ ವಿಚಾರಕ್ಕೆ ವಾಗ್ವಾದ ನಡೆದಿದೆ. ‘ಟಾಸ್ಕ್‌ ವಿಷಯದಲ್ಲಿ ಮಹಿಳೆಯರನ್ನು ಕಡೆಗಣಿಸುತ್ತಿದ್ದು, ಇದರಿಂದಾಗಿ ಮಹಿಳೆಯರಿಗೆ ಗೆಲ್ಲಲು ಸಾಧ್ಯವಾಗುತ್ತಿಲ್ಲ’ ಎಂದು ಸಂಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ಒಂದು ಟಾಸ್ಕ್‌ ನೀಡಿದ್ದು, ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯವಿದೆ ಎಂದು ಹೇಳಿದೆ. ಟಾಸ್ಕ್‌ಗೆ ಆಯ್ಕೆ ಮಾಡುವಾಗ ವಿನಯ್‌, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ. ಮಹಿಳೆಯರನ್ನು ಬಿಟ್ಟು ಕೇವಲ ಪುರುಷರನ್ನು ಆಯ್ಕೆ ಮಾಡಿರುವುದಕ್ಕೆ ಸಂಗೀತಾ ತಕರಾರು ತೆಗೆದಿದ್ದಾರೆ.

‘ನಾನು ಯಾಕೆ ಬೇಡ ಅಂತ ಕಾರಣ ನೀಡಿಲ್ಲ. ಇದರಿಂದ ಮಹಿಳೆಯರು ಗೆಲ್ಲಲು ಸಾಧ್ಯವಾಗುತ್ತಿಲ್ಲ’ ಎಂದು ಸಂಗೀತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ವಿನಯ್, ‘ಮಹಿಳೆ–ಪುರುಷ ಎಂದು ಬೇರೆ ಮಾಡಿ ನೋಡುವುದು ಸರಿಯಲ್ಲ. ಈ ಮನೆಯಲ್ಲಿ ನಿನ್ನ ಬಾಯಲ್ಲಿ ಮಾತ್ರ ಯಾಕೆ ಮಹಿಳೆ–ಪುರುಷ ಅನ್ನೋ ತಾರತಮ್ಯದ ಮಾತು ಕೇಳಿಸುತ್ತದೆ?’ ಎಂದು ಗರಂ ಆಗಿದ್ದಾರೆ.

‘ಅವಕಾಶ ಸಿಕ್ತಿದೆ ಅಂತ ಬೇರೆ ವಿಷಯವನೆಲ್ಲ ಇಲ್ಲಿಗೆ ಎಳೆದು ತರಬೇಡಿ’ ಎಂದು ಸಂಗೀತಾ ಕೂಡ ಅಷ್ಟೇ ಗಟ್ಟಿಯಾಗಿ ಮಾತಾಡಿದ್ದಾರೆ.

ತನಿಷಾ ಕೂಡ ಸಂಗೀತಾ ವಿರುದ್ಧ ಗುಡುಗಿದ್ದು, ‘ನೀವು ಆಡಿದ ಎಲ್ಲ ಟಾಸ್ಕ್‌ಗಳಲ್ಲಿಯೂ ಫರ್ಪೆಕ್ಟ್ ಆಗಿ ಆಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ಮಹಿಳೆ-ಪುರುಷರ ನಡುವಿನ ತಾರತಮ್ಯದ ಬಗ್ಗೆ ಚರ್ಚೆ ಜೋರಾಗಿಯೇ ಮುಂದುವರಿಯುತ್ತಿದೆ. ಇದರ ಪರಿಣಾಮ ಏನಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT