ಭಾನುವಾರ, ಏಪ್ರಿಲ್ 2, 2023
32 °C

BBK9: ಸಾನ್ಯಾ–ರೂಪೇಶ್ ಶೆಟ್ಟಿ ಕುಟುಂಬದ ಬಟ್ಟೆ ಜಗಳ– ಸ್ಪಷ್ಟನೆ ಪಡೆದ ಸುದೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ 9ನೇ ಆವೃತ್ತಿಯಿಂದ ಎಲಿಮಿನೇಟ್ ಆಗಿರುವ ಸಾನ್ಯಾ ಅಯ್ಯರ್ ಹೊರಗಿದ್ದರೂ ಸಹ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಆಪ್ತ ಗೆಳೆಯ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿರುವುದು.. 

ಹೌದು, ರೂಪೇಶ್ ಶೆಟ್ಟಿಗೆ ಬಟ್ಟೆಗಳನ್ನು ಕಳುಹಿಸುವ ವಿಚಾರವಾಗಿ ಸಾನ್ಯಾ ಸದ್ದು ಮಾಡುತ್ತಿದ್ದಾರೆ. ನಾನು ಕಳುಹಿಸಿದ ಬಟ್ಟೆಗಳನ್ನು ಶೆಟ್ಟಿಗೆ ನೀಡುತ್ತಿಲ್ಲ ಎಂದು ಕಾರ್ಯಕ್ರಮದ ತಂಡವನ್ನು ಪ್ರಶ್ನಿಸಿದ್ದಾರಂತೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲೂ ಈ ಬಗ್ಗೆ ಪೋಸ್ಟ್ ಮಾಡಿರುವುದು ವಿವಾದಕ್ಕೆ ಎಡೆಮಾಡಿದೆ.

ಈ ಕುರಿತಂತೆ ವೀಕೆಂಡ್ ಎಪಿಸೋಡ್‌ನಲ್ಲಿ ರೂಪೇಶ್ ಶೆಟ್ಟಿಯನ್ನು ಪ್ರಶ್ನಿಸಿದ ನಿರೂಪಕ ಸುದೀಪ್,‘ನಿಮಗೆ ಎರಡು ಕಡೆಯಿಂದ ಬಟ್ಟೆಗಳು ಬರುತ್ತಿವೆ. ನಿಮ್ಮ ಮನೆಯವರು ಮತ್ತು ಸಾನ್ಯಾ ಕಳುಹಿಸುತ್ತಿದ್ದಾರೆ. ಸಾನ್ಯಾ ನೀಡಿದ ಬಟ್ಟೆಗಳನ್ನು ಕೊಡುವುದಕ್ಕೆ ನಿಮ್ಮ ಮನೆಯಿಂದ ಆಕ್ಷೇಪವಿದೆ. ಇದನ್ನೇ ಕಾರಣ ಮಾಡಿಕೊಂಡು ಸಾನ್ಯಾ ಅವರು, ನಾನು ಕಳುಹಿಸುತ್ತಿರುವ ಬಟ್ಟೆಗಳನ್ನು ಶೆಟ್ಟಿಗೆ ನೀಡುತ್ತಿಲ್ಲವೆಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈಗ ನೀವೇ ಹೇಳಿ ಯಾರ ಬಟ್ಟೆಗಳನ್ನು ಕಳುಹಿಸಬೇಕು ಎಂದು ಪ್ರಶ್ನೆ ಹಾಕಿದರು.

ಈ ವೇಳೆ, ಕೊಂಚ ಗೊಂದಲಕ್ಕೀಡಾದ ರೂಪೇಶ್ ಶೆಟ್ಟಿ, ಮನೆಯವರು ಈ ರೀತಿ ಹೇಳುತ್ತಿದ್ದಾರೆ ಎಂದರೆ ಒಂದು ಅರ್ಥವಿರುತ್ತದೆ. ಸದ್ಯ, ಮನೆಯವರ ಬಟ್ಟೆಗಳನ್ನೇ ಕಳುಹಿಸಿ ಎಂದರು. ಬಳಿಕ, ಸಾನ್ಯಾರನ್ನು ಉದ್ದೇಶಿಸಿ, ನನಗೆ ಇಬ್ಬರೂ ಸಮಾನರೇ. ಹೊರಗೆ ಬಂದ ಬಳಿಕ ನಿಮ್ಮ ಜೊತೆ ಮಾತನಾಡುವೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಈ ಹಿಂದೆ ಒಂದೆರಡು ಬಾರಿ ಸಾನ್ಯಾ ಕಳುಹಿಸಿದ್ದ ಬಟ್ಟೆಗಳನ್ನು ರೂಪೇಶ್ ಶೆಟ್ಟಿ ಹಾಕಿಕೊಂಡಿದ್ದರು. ಸಾನ್ಯಾ ಹೊರಗೆ ಹೋಗಿದ್ದರಿಂದ ನೊಂದುಕೊಂಡು ತಲೆಗೆ ‘ಐ ಮಿಸ್ ಯೂ ಸಾನ್ಯಾ’ಎಂದು ಬರೆದಿರುವ ಟೇಪ್ ಕಟ್ಟಿಕೊಂಡಿದ್ದರು. ತನಗೊಂದು ಸಾನ್ಯಾಗೊಂದು ತಟ್ಟೆ ಇಟ್ಟುಕೊಂಡು ಊಟ ಮಾಡಿ ತಮ್ಮ ನೋವು ತೋಡಿಕೊಳ್ಳುತ್ತಿದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು