ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10: ಕನ್ನಡಿಯ ಮುಂದೆ ಕುಳಿತು ತಮ್ಮೊಂದಿಗೆ ತಾವೇ ಮಾತನಾಡಿಕೊಂಡ ಸ್ಪರ್ಧಿಗಳು

Published 24 ಜನವರಿ 2024, 4:48 IST
Last Updated 24 ಜನವರಿ 2024, 4:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗ್ರ್ಯಾಂಡ್‌ ಫಿನಾಲೆಗೆ ಇನ್ನು ಎರಡನೇ ದಿನ ಬಾಕಿ ಉಳಿದಿದೆ. ಈ ಬಾರಿಯ ಕಪ್‌ ಯಾರ ಕೈ ಸೇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. 

ಈ ನಡುವೆ ಕನ್ನಡಿಯ ಮುಂದು ಕುಳಿತು ಮಾತನಾಡಿಕೊಳ್ಳುವ ಅವಕಾಶವನ್ನು ಬಿಗ್‌ ಬಾಸ್ ಮನೆಯ ಸದಸ್ಯರಿಗೆ ನೀಡಿದ್ದಾರೆ. ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು ಇಷ್ಟು ದಿನಗಳಲ್ಲಿ ಕಟ್ಟಿಕೊಂಡ ತಮ್ಮದೇ ವ್ಯಕ್ತಿಚಿತ್ರಗಳನ್ನು ನೋಡಿ ಕರಗಿದ್ದಾರೆ.

ತಮ್ಮದೇ ಪ್ರತಿಬಿಂಬ ಕಂಡು ತಪ್ಪು –ಒಪ್ಪು, ಮನದಾಳದಲ್ಲಿ ಹುದುಗಿದ್ದ ನೋವು, ಇತರರಿಂದ ಹೇಳಿಸಿಕೊಂಡು ಅರಗಿಸಿಕೊಳ್ಳಲಾರದೆ ಉಳಿದುಕೊಡ ಮಾತುಗಳು ಹೊರಬಂದಿವೆ. 

ಈ ವಾರ ಮನೆಯಲ್ಲಿ ವಿನಯ್‌, ಸಂಗೀತಾ, ಪ್ರತಾಪ್‌, ಕಾರ್ತಿಕ್‌, ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ಉಳಿದುಕೊಂಡಿದ್ದಾರೆ.

‘ನನ್ನ ಕಾಣುವ ಹುಡುಕಾಟದಲ್ಲಿ ನನ್ನನ್ನು ಹುಡುಕಿಕೊಂಡಿರುವೆ. ಯಾರು ಜೊತೆಯಿಲ್ಲದಾಗ ನೀನಿದ್ದೆ’ ಎಂದು ಸಂಗೀತಾ ಹೇಳಿದ್ದಾರೆ. ಇತ್ತ ಕಾರ್ತಿಕ್‌, ‘ಸ್ನೇಹವನ್ನು ಬಳಸಿಕೊಳ್ಳುತ್ತೀಯಾ ಎನ್ನುವ ಆರೋಪ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT