ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

BBK11: ಬಿಗ್ ಬಾಸ್ ಕನ್ನಡ ಸೀಸನ್‌ 11ರ ಸ್ಪರ್ಧಿಗಳ ಪರಿಚಯ ಇಲ್ಲಿದೆ..

ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ
Published : 29 ಸೆಪ್ಟೆಂಬರ್ 2024, 13:37 IST
Last Updated : 29 ಸೆಪ್ಟೆಂಬರ್ 2024, 13:37 IST
ಫಾಲೋ ಮಾಡಿ
Comments

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಈ ರಿಯಾಲಿಟಿ ಶೋ ಅನ್ನು ಖ್ಯಾತ ನಟ ಸುದೀಪ್ ಅವರು ನಿರೂಪಿಸುತ್ತಿದ್ದಾರೆ.

10 ಯಶಸ್ವಿ ಸೀಸನ್‌ಗಳ ತರುವಾಯ ಇಂದು 11 ನೇ ಸೀಸನ್‌ಗೆ ಚಾಲನೆ ಸಿಕ್ಕಿದೆ.

ಇದೇ ವೇಳೆ ಈ ಸೀಸನ್‌ನಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಯಾರು ಎಂಬುದನ್ನು ನಾಲ್ಕು ಅಭ್ಯರ್ಥಿಗಳ ಬಗ್ಗೆ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ವೇಳೆ ಬಹಿರಂಗಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.

ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌, ಲಾಯರ್ ಜಗದೀಶ್, ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕ ಮೂಲದ ಗೋಲ್ಡ್‌ ಸುರೇಶ್‌ ಅವರ ಹೆಸರನ್ನು ರಾಜ–ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ಬಹಿರಂಗ ಮಾಡಲಾಗಿದೆ.

ಈ ಸಾರಿಯ ಬಿಗ್ ಬಾಸ್ ಕನ್ನಡ ಚಾಫ್ಟರ್ 11ರಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಪರಿಚಯ ಇಲ್ಲಿದೆ..

ನಟಿ ಭವ್ಯಾ ಗೌಡ

ಮೊದಲ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಯೊಳಗೆ 'ಗೀತಾ' ಧಾರಾವಾಹಿ ನಟಿ ಭವ್ಯಾ ಗೌಡ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ಧಾರವಾಹಿ ಮೂಲಕ ಅವರು ಜನಪ್ರಿಯರಾಗಿದ್ದಾರೆ. 2009ರಿಂದಲೂ ಅವರು ಮಾಡೆಲಿಂಗ್ ಹಾಗೂ ನಟನೆ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಭವ್ಯಾ ಗೌಡ

ಭವ್ಯಾ ಗೌಡ

ಯಮುನಾ ಶ್ರೀನಿಧಿ

ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಮೈಸೂರು ಮೂಲದ ನಟಿ, ಭರತನಾಟ್ಯ ಕಲಾವಿದೆ ಯಮುನಾ ಶ್ರಿನಿಧಿ ಕಾಲಿಟ್ಟಿದ್ದಾರೆ. ಅಶ್ವಿನಿ ನಕ್ಷತ್ರ ಸೇರಿದಂತೆ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿ, ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ತೆಲುಗು ಭಾಷೆಯ ಕೆಲ ಧಾರಾವಾಹಿ, ಚಿತ್ರಗಳಲ್ಲೂ ನಟಿಸಿದ್ದಾರೆ.

ಯಮುನಾ ಶ್ರೀನಿಧಿ

ಯಮುನಾ ಶ್ರೀನಿಧಿ

ಧನರಾಜ್ ಆಚಾರ್

ದಕ್ಷಿಣ ಕನ್ನಡ ಮೂಲದ ಧನರಾಜ್ ಆಚಾರ್ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಶಾರ್ಟ್ ವಿಡಿಯೊ, ಶಾರ್ಟ್ ಮೂವಿ, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವರು ಜನಪ್ರಿಯರಾಗಿದ್ದಾರೆ.

ಧನರಾಜ್ ಆಚಾರ್

ಧನರಾಜ್ ಆಚಾರ್

ಗೌತಮಿ ಜಾಧವ್

ಸತ್ಯ ಧಾರಾವಾಹಿಯಿಂದ ಮನೆ ಮಾತಾಗಿರುವ ನಟಿ ಗೌತಮಿ ಜಾದವ್ ಅವರು ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತಿ ಅಭಿಷೇಕ್ ಕಾಸರಗೋಡ್ ಕನ್ನಡ ಚಿತ್ರರಂಗ ಖ್ಯಾತ ಛಾಯಾಗ್ರಾಹಕ. ಗೌತಮಿ ಜಾಧವ್ 2018ರಲ್ಲಿ ತೆರೆಕಂಡ ಕಿನಾರೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ಆದ್ಯ ಚಿತ್ರದಲ್ಲಿ ಅಭಿನಯಿಸಿದರು. ಕೆಲ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಗೌತಮಿ ಜಾಧವ್

ಗೌತಮಿ ಜಾಧವ್

ಅನುಷಾ ರೈ

ಬೆಂಗಳೂರು ಮೂಲದ ನಟಿ ಅನುಷಾ ರೈ ಅವರು ಐದನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಕೆಲವು ಚಿತ್ರಗಳಲ್ಲಿಯೂ ನಟಿಸಿರುವ ಅವರು ಅಣ್ಣಯ್ಯ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಅನುಷಾ ರೈ

ಅನುಷಾ ರೈ

ಧರ್ಮ ಕೀರ್ತಿರಾಜ್

ನವಗ್ರಹ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬೆಳಕಿಗೆ ಬಂದ ನಟ ಧರ್ಮ ಕೀರ್ತಿರಾಜ್ ಅವರು 6 ನೇ ಅಭ್ಯರ್ಥಿಯಾಗಿ ಮನೆಗೆ ಬಂದರು. ಹಿರಿಯ ನಟ ಕೀರ್ತಿರಾಜ್ ಅವರ ಪುತ್ರರಾಗಿರುವ ಅವರು ನವಗ್ರಹ ಚಿತ್ರ ಅಲ್ಲದೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆ–ತಾಯಿ ಆಶೀರ್ವಾದದ ಮೂಲಕ ಅವರು ಮನೆ ಪ್ರವೇಶಿಸಿದರು.

ಧರ್ಮ ಕೀರ್ತಿರಾಜ್

ಧರ್ಮ ಕೀರ್ತಿರಾಜ್

ಲಾಯರ್ ಜಗದೀಶ್

ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಲಾಯರ್ ಜಗದೀಶ್ 7ನೇ ಅಭ್ಯರ್ಥಿಯಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಹಲವು ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಅವರು ಹಲವು ಆರೋಪ ಮಾಡಿ ಗಮನ ಸೆಳೆದಿದ್ದರು. 'ನಮ್ಮ ಜನ ನರಕದಲ್ಲಿದ್ದಾರೆ. ನಾನು ಬಿಗ್ ಬಾಸ್ ಮನೆಯ ನರಕಕ್ಕೆ ಹೋಗೋದಕ್ಕೆ ರೆಡಿ' ಎಂದ ಲಾಯರ್ ಜಗದೀಶ್ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಲಾಯರ್ ಜಗದೀಶ್

ಲಾಯರ್ ಜಗದೀಶ್

ಶಿಶೀರ್ ಶಾಸ್ತ್ರಿ

ನಟ ಹಾಗೂ ಡ್ಯಾನ್ಸರ್ ಶಿಶಿರ್ ಶಾಸ್ತ್ರಿ ಅವರು 8 ನೇ ಅಭ್ಯರ್ಥಿಯಾಗಿ ಮನೆಗೆ ಹೋಗಿದ್ದಾರೆ. ಸೊಸೆ ತಂದ ಸೌಭಾಗ್ಯ, ಪುಟ್ಟ ಗೌರಿ ಮದುವೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಲ್‌ಗೇಟ್ಸ್ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಉದ್ಯಮಿ ಪುತ್ರರಾಗಿರುವ ಅವರು ತಮ್ಮದೇಯಾದ ಕಂಪನಿ ಹೊಂದಿದ್ದಾರೆ.

ಶಿಶೀರ್ ಶಾಸ್ತ್ರಿ

ಶಿಶೀರ್ ಶಾಸ್ತ್ರಿ

ತ್ರಿವಿಕ್ರಮ್

ಪದ್ಮಾವತಿ ಧಾರಾವಾಹಿ ನಟ ಹಾಗೂ ಫಿಟ್‌ನೆಸ್ ಚಟುವಟಿಕೆ ಮೂಲಕ ಗುರುತಿಸಿಕೊಂಡಿರುವ ತ್ರಿವಿಕ್ರಮ್‌ ಅವರು ಒಂಬತ್ತನೇ ಸ್ಪರ್ಧಿಯಾಗಿ ಬಿಗ್‌ ಮನೆಗೆ ಕಾಲಿಟ್ಟಿದ್ದಾರೆ. ರಂಗನಾಯಕಿ ಹಾಗೂ ನವರಾತ್ರಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.

ತ್ರಿವಿಕ್ರಮ್

ತ್ರಿವಿಕ್ರಮ್

ನಟಿ ಹಂಸಾ ಪ್ರತಾಪ್

ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಹಂಸಾ ಪ್ರತಾಪ್ ಅವರು 10ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿದ್ದಾರೆ. ಅವರ ಗಂಡ, ತಂದೆ, ಮಗ ಅವರಿಗೆ ಬೀಳ್ಕೊಟ್ಟರು.

ಹಂಸಾ ಪ್ರತಾಪ್

ಹಂಸಾ ಪ್ರತಾಪ್

ಮಾನಸ ಸಂತೋಷ್

ಹಾಸ್ಯ ನಟ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಸಂತೋಷ್ ಅವರು 11ನೇ ಸ್ಪರ್ಧಿಯಾಗಿ ಮನೆಗೆ ಹೋಗಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಾನಸ ಸಂತೋಷ್

ಮಾನಸ ಸಂತೋಷ್

ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು. ಇವರು 12ನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆರಂಭದಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ, ಬಳಿಕ ‘ಇಸ್ವಾ’ ಎಂಬ ತಮ್ಮದೇಯಾದ ಒಂದು ಇವೆಂಟ್ ಕಂಪನಿ ಸ್ಥಾಪಿಸಿದ್ದಾರೆ. ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವ ಫ್ಯಾಷನ್ ಹೊಂದಿರುವ ಇವರನ್ನು, ವರ್ತೂರ್ ಸಂತೋಷ್ ಅವರ ಡೂಪ್ ಎನ್ನುತ್ತಿದ್ದಾರೆ ಹಲವರು.

ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್

ಐಶ್ವರ್ಯಾ ಸಿಂಧೋಗಿ

ಹದಿಮೂರನೇ ಸ್ಪರ್ಧಿಯಾಗಿ ಐಶ್ವರ್ಯಾ ಸಿಂಧೋಗಿ ಬಿಗ್ ಬಾಸ್‌ ಮನೆಯೊಳಗೆ ಹೋಗಿದ್ದಾರೆ.

ಚೈತ್ರಾ ಕುಂದಾಪುರ

14ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಕುಂದಾಪುರ ಮೂಲದ ವಿವಾದಾತ್ಮಕ ಹಿಂದೂ ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಕಾಲಿಟ್ಟಿದ್ದಾರೆ. ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ

ಮಂಜುನಾಥ್ ಗೌಡ

ಹದಿನೈದನೇ ಸ್ಪರ್ಧಿ ಉಗ್ರಂ ಸಿನಿಮಾ ಖ್ಯಾತಿಯ ನಟ ಮಂಜುನಾಥ್ ಗೌಡ. ತಾಯಿಗಾಗಿ ಕಪ್‌ ಗೆಲ್ಲಬೇಕು ಅಂತ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಮೋಕ್ಷಿತಾ ಪೈ

ಹದಿನಾರನೇ ಸ್ಪರ್ಧಿ ‘ಪಾರು’ ಸೀರಿಯಲ್ ನಟಿ ಮೋಕ್ಷಿತಾ ಪೈ. ಹೆಣ್ಮಕ್ಕಳು ಸ್ಟ್ರಾಂಗ್ ಆಗಿ ಇರಬೇಕು ಅಂತ ತೋರಿಸುವ ಸಲುವಾಗಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರಂತೆ

ರಂಜಿತ್

‘ಶನಿ’ ಸೀರಿಯಲ್‌ನಲ್ಲಿ ಸೂರ್ಯದೇವನ ಪಾತ್ರ ಮಾಡಿದವರು ರಂಜಿತ್ ಹದಿನೇಳನೇ ಸ್ಪರ್ಧಿ.

ಸ್ವರ್ಗದಲ್ಲಿ 10 ಮಂದಿ, ನರಕದಲ್ಲಿ 7 ಮಂದಿ!

17 ಸ್ಪರ್ಧಿಗಳ ಪೈಕಿ 10 ಜನ ಸ್ವರ್ಗದಲ್ಲಿದ್ದರೆ, 7 ಜನ ನರಕದಲ್ಲಿದ್ದಾರೆ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್‌, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್, ಲಾಯರ್ ಜಗದೀಶ್, ತ್ರಿವಿಕ್ರಮ್, ಹಂಸ, ಐಶ್ವರ್ಯಾ ಸಿಂಧೋಗಿ ಮತ್ತು ಉಗ್ರಂ ಮಂಜು ಸ್ವರ್ಗ ನಿವಾಸಿಗಳಾಗಿದ್ದಾರೆ.

ಅನುಷಾ ರೈ, ಶಿಶಿರ್ ಶಾಸ್ತ್ರಿ, ಮಾನಸಾ ಸಂತು, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಂಜಿತ್ ನರಕ ನಿವಾಸಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT