ಶನಿವಾರ, ಮೇ 15, 2021
29 °C

Bigg Boss 8: ಬಿಗ್‌ಬಾಸ್‌ ಮನೆಯಲ್ಲಿ ಈ ವಾರಾಂತ್ಯಕ್ಕೂ ಸುದೀಪ್‌ ಅನುಪಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ನಟ ಸುದೀಪ್‌, ಈ ವಾರಾಂತ್ಯದ ಬಿಗ್‌ಬಾಸ್‌ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ನಲ್ಲಿ ಭಾಗವಹಿಸುತ್ತಿಲ್ಲ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಕಳೆದ ವಾರದ ಸಂಚಿಕೆಗಳೂ ಸುದೀಪ್‌ ಅನುಪಸ್ಥಿತಿಯಲ್ಲಿ ನಡೆದಿತ್ತು. ಇದಕ್ಕೆ ಪರ್ಯಾಯವಾಗಿ, ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದ ಸ್ಪರ್ಧಿಗಳನ್ನು ಹಲವು ಆಟದ ಮುಖಾಂತರ ಸೇಫ್‌ ಮಾಡಲಾಗಿತ್ತು. ‘ಈ ವಾರದ ಬಿಗ್‌ಬಾಸ್‌ ಎಪಿಸೋಡ್‌ಗಳಲ್ಲೂ ನಾನು ಭಾಗವಹಿಸುತ್ತಿಲ್ಲ. ವೇದಿಕೆಯಲ್ಲಿ ಹಲವು ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು, ನನಗೆ ಇನ್ನಷ್ಟು ವಿಶ್ರಾಂತಿಯ ಅಗತ್ಯತೆ ಇದೆ. ನಾನು ಸಂಪೂರ್ಣವಾಗಿ ಆರೋಗ್ಯದಲ್ಲಿದ್ದರಷ್ಟೇ ಸ್ಪರ್ಧಿಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಇದು ಕಠಿಣ ನಿರ್ಧಾರ, ಚಿತ್ರೀಕರಣ ರದ್ದುಗೊಳಿಸಿದ ಕಲರ್ಸ್‌ ಕನ್ನಡಕ್ಕೆ ಧನ್ಯವಾದ. ನಿಮ್ಮ ಪ್ರಾರ್ಥನೆಗೆ ಧನ್ಯವಾದ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಬಿಗ್‌ಬಾಸ್‌ ರಿಯಾಲಿಟಿ ಶೋನ ವಾರಾಂತ್ಯದ ಸಂಚಿಕೆಗಳು ಎರಡನೇ ಬಾರಿಗೆ ಸುದೀಪ್‌ ಅನುಪಸ್ಥಿತಿಯಲ್ಲಿ ನಡೆಯಲಿದ್ದು, ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಾಗಿದೆ. ಹೀಗಾಗಿ ಈ ವಾರದ ಎಲಿಮಿನೇಶನ್‌ಗೆ ಕಲರ್ಸ್‌ ಕನ್ನಡ ಬಿಗ್‌ಬಾಸ್‌ ತಂಡವು ಯಾವ ರೀತಿ ಸ್ಪರ್ಧೆಗಳನ್ನು, ಟಾಸ್ಕ್‌ಗಳನ್ನು ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಕಳೆದ ವಾರ ಮನೆಯಿಂದ ಹೊರನಡೆದ ವಿಶ್ವನಾಥ್‌, ನಿಧಿ ಸುಬ್ಬಯ್ಯ ಅವರನ್ನು ಈ ವಾರದ ಎಲಿಮಿನೇಷನ್‌ನಿಂದ ಪಾರು ಮಾಡಿ‌ದ್ದರು.

ಇದನ್ನೂ ಓದಿ... Bigg Boss 8: ಉಟ್ಟ ಬಟ್ಟೆಯಲ್ಲೇ ಒಂದು ವಾರ.. ತ್ಯಾಗ ಮಾಡಿ ಹೀರೊ ಆದ ಶಮಂತ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು