ಶನಿವಾರ, ಜುಲೈ 24, 2021
20 °C

Bigg Boss 8: ಕ್ಯಾಪ್ಟನ್ ಕೊಠಡಿಯಲ್ಲಿ ಶಮಂತ್ ಕಂಡಿದ್ದೇನು?ಪ್ರಿಯಾಂಕಾ ಹೇಳೋದೇನು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಸೀಸನ್ 8ಕ್ಕೆ ಮರು ಚಾಲನೆ ಸಿಕ್ಕಿದ್ದು, ಮನೆ ಮಂದಿಯೆಲ್ಲ ಟ್ರ್ಯಾಕ್‌ಗೆ ಮರಳುತ್ತಿದ್ದಾರೆ. ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ಈ ಮಧ್ಯೆಯೇ ಮನೆಯ ಲಕ್ಕಿ ಬಾಯ್ ಶಮಂತ್ ಮನೆಯಲ್ಲಿ ಏನನ್ನೋ ಕಂಡು ಬೆದರಿದ್ದಾರೆ.

ಹೌದು, ಮನೆಯ ಬೆಡ್ ರೂಮಿನಲ್ಲಿ ಅರವಿಂದ್, ದಿವ್ಯಾ ಮುಂತಾದವರ ಜೊತೆ ಕುಳಿತು ಮಾತನಾಡುತ್ತಿದ್ದಾಗ ಕ್ಯಾಪ್ಟನ್ ರೂಮ್ ಕಡೆಯಿಂದ ವಾಶ್ ರೂಮ್ ಕಡೆಗೆ ಕಪ್ಪನೆಯ ಆಕೃತಿ ಚಲಿಸಿದ್ದನ್ನು ಕಂಡೆ ಎಂದು ಶಮಂತ್ ಪ್ರಿಯಾಂಕಾ ಬಳಿ ಭಯದಿಂದಲೇ ಹೇಳಿದ್ದಾರೆ. ನಿಜವಾಗಿಯೂ ನೋಡಿದೆಯಾ? ಎಂದು ಪ್ರಿಯಾಂಕಾ ಕೇಳಿದಾಗಲೂ ಗಂಭೀರವಾಗಿ ಬ್ರೋ ಗೌಡ ಉತ್ತರಿಸಿದ್ದಾರೆ. ಚಕ್ರವರ್ತಿ ಬಳಿಯೂ ಇದೇ ವಿಚಾರ ಚರ್ಚಿಸಿದ್ದಾರೆ. ಮತ್ತೊಮ್ಮೆ, ಕಂಡರೆ ನಮಗೂ ತೋರಿಸು ಎಂದ ಚಂದ್ರಚೂಡ್, ಕ್ಯಾಪ್ಟನ್ ಕೊಠಡಿಯ ಮೇಲ್ಭಾಗ ಪಾರದರ್ಶಕವಾಗಿದೆ. ಅಲ್ಲಿ ಯಾರೋ ಕೆಲಸ ಮಾಡುತ್ತಿದ್ದಾಗ ನೆರಳು ಬಿದ್ದಿರಬಹುದು ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ಶಮಂತ್ ಮಾತ್ರ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.

ಪ್ರಿಯಾಂಕಾ ಬಳಿ ಹೊಸ ಲಾಜಿಕ್ ಇಟ್ಟ ಬ್ರೋ ಗೌಡ: ಕ್ಯಾಪ್ಟನ್ ಕೊಠಡಿಯಲ್ಲಿ ಏನೋ ಇದೆ. ನಾನು ಎರಡು ವಾರ ನಾಯಕನಾಗಿದ್ದಾಗ ನಿದ್ದೆಯೇ ಬರಲಿಲ್ಲ. ಅಲ್ಲಿಗೆ ಹೋದವರ್ಯಾರೂ ಸರಿಯಾಗಿ ನಿದ್ದೆ ಮಾಡಲ್ಲ. ಹಾಗಾಗಿ, ಕನ್ಫರ್ಮ್ ಅದು ಅದೇ ಎನ್ನುವ ಮೂಲಕ ಶಮಂತ್, ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟವಿದೆ ಎಂಬಂತೆ ಮಾತನಾಡಿದ್ದಾರೆ.

ಈ ಮಧ್ಯೆ, ಮನೆಯಲ್ಲಿ ಕ್ಯಾಪ್ಟನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳು ನಡೆಯುತ್ತಿದ್ದು, ಶಮಂತ್ ಪ್ಲಾನ್ ಮಾಡಿಕೊಂಡು ಕ್ಯಾಪ್ಟನ್ ಸ್ಥಾನಕ್ಕೆ ಯಾರೂ ಪ್ರಯತ್ನಿಸದಿರಲಿ ಎಂದು ಗೇಮ್ ಆಡುತ್ತಿದ್ದಾರಾ? ಎಂಬ ಅನುಮಾನಕ್ಕೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ. ಕ್ಯಾಮೆರಾ ಬಳಿ ತೆರಳಿ ಬಿಗ್‌ ಬಾಸ್‌ಗೂ ಸಹ ಶಮಂತ್ ಈ ವಿಷಯ ತಿಳಿಸಿದ್ದಾರೆ. ಇತ್ತ, ಸದಾ ಶಮಂತ್ ಕಾಲೆಳೆಯುವ ಪ್ರಿಯಾಂಕಾ ತಿಮ್ಮೇಶ್, ವಾಶ್ ರೂಮ್‌ಗೆ ಹೋಗುವಾಗ ಯಾರನ್ನಾದರೂ ಕರೆದುಕೊಂಡು ಹೋಗೋ ಎಂದು ತಮಾಷೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು