ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿ ಮಹತ್ವದ ಘಟ್ಟ ತಲುಪಿದ್ದು, ಮನೆಯಲ್ಲಿರುವ ಸದಸ್ಯರು 50 ದಿನ ಪೂರೈಸಿದ್ಧಾರೆ. ಈ ಹಿನ್ನೆಲೆಯಲ್ಲಿ ಈ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಆದರೆ, ಎಲಿಮಿನೇಶನ್ ಡ್ರಾಮಾ ಮಾತ್ರ ನಡೆಯಿತು.
ಹೌದು, ಶನಿವಾರದ ಸಂಚಿಕೆಯಲ್ಲಿ ದಿವ್ಯಾ ಉರುಡುಗ, ಅರುಣ್ ಸಾಗರ್ ಅವರನ್ನು ಸೇವ್ ಮಾಡಿದ ಸುದೀಪ್, ಭಾನುವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಅವರನ್ನು ಸೇವ್ ಮಾಡಿ, ಆರ್ಯವರ್ಧನ್ ಅವರನ್ನು ಹೊರಹೋಗುತ್ತಿರುವುದಾಗಿ ಘೋಷಿಸಿದರು. ಕೂಡಲೇ ಎದ್ದು ನಿಂತ ಆರ್ಯವರ್ಧನ್, ಥ್ಯಾಂಕ್ಸ್ ಸುದೀಪ್ ಸರ್.. ಡಿಸೆಂಬರ್ 5ಕ್ಕೆ ನನ್ನ ಮಗಳ ಹುಟ್ಟುಹಬ್ಬ ಇದೆ. ಮನೆಗೆ ಹೋಗುತ್ತಿರುವುದು ಖುಷಿ ವಿಚಾರವೇ ಎಂದು ಹೇಳಿ ಹೊರಟುಬಿಟ್ಟರು. ಗಡಿಬಿಡಿಯಲ್ಲಿ ಬ್ಯಾಗ್ ತೆಗೆದುಕೊಂಡು ಹೊರಟರು. ಬಾಗಿಲ ಬಳಿ ನಿಂತು ಬಿಗ್ ಬಾಸ್ ಬಾಗಿಲು ತೆರೆಯಿರಿ ಎಂದು ಕೂಗಿದರು.
ಆದರೆ, ಅಲ್ಲಿ ಆಗಿದ್ದೇ ಬೇರೆ. ನೀವು ಹೊರಹೋಗುವ ಅಗತ್ಯವಿಲ್ಲ. ಒಳಗೆ ಹೋಗಿ ಈ ವಾರ ಎಲಿಮಿನೇಶನ್ ಇಲ್ಲದ ವಾರವಾಗಿರುವುದರಿಂದ ಯಾರನ್ನೂ ಕಳುಹಿಸುತ್ತಿಲ್ಲ ಎಂದು ಬಿಗ್ ಬಾಸ್ ಘೋಷಿಸಿದರು.
ಎಲಿಮಿನೇಶನ್ ಇಲ್ಲವೆಂದಿದ್ದಕ್ಕೆ ಅಳಲು ಆರಂಭಿಸಿದ ಆರ್ಯವರ್ಧನ್
ಹೌದು, ಹೇಗೊ ಎಲಿಮಿನೇಟ್ ಆದೆ. ಮಗಳನ್ನು ನೋಡಬಹುದು ಎಂಬ ಖುಷಿಯಲ್ಲಿದ್ದ ಆರ್ಯವರ್ಧನ್ ಅವರಿಗೆ ಕೊನೇ ಕ್ಷಣದಲ್ಲಿ ಬಿಗ್ ಬಾಸ್ ಮಾಡಿದ ಘೋಷಣೆ ಆಘಾತವಾಗಿತ್ತು.
ಬಾಗಿಲ ಬಳಿಯೇ ಅಯ್ಯೊ... ನಾನು ಮಗಳನ್ನ ನೋಡಬೇಕು. ಮಗಳೇ ಅಲಿಯಾ ಎಂದು ಗೋಳಾಡಿದರು. ಹತ್ತಿರ ಬಂದ ಮನೆಯ ಸದಸ್ಯರು ಅವರನ್ನು ಸಂತೈಸಿ ಕರೆದೊಯ್ದರು.
ಇದನ್ನೆಲ್ಲ ನೋಡುತ್ತಿದ್ದ ನಿರೂಪಕ ಸುದೀಪ್, ಆರ್ಯವರ್ಧನ್ ಅವರೆ ನೀವು ಎಲಿಮಿನೇಟ್ ಆಗಿಲ್ಲ ಎಂದು ನಿಮ್ಮ ಮಗಳೇ ಖುಷಿಯಾಗಿರುತ್ತಾರೆ. ಅದನ್ನು ನೆನಪಿಸಿಕೊಂಡು ಆನಂದದಿಂದಿರಿ ಎಂದು ತಿಳಿ ಹೇಳಿದರು. ಅಲ್ಲದೆ, ಈ ವಾರ ಎಲಿಮಿನೇಶನ್ ಇರಲಿಲ್ಲ. ವೋಟಿಂಗ್ ಲೈನ್ ಓಪನ್ ಆಗೇ ಇಲ್ಲ ಎಂದು ಘೋಷಿಸಿದರು. ಬಳಿಕ, ಮನೆಯ ಸದಸ್ಯರ ಮುಂದೆ 50 ದಿನಗಳ ವಿಟಿ ಪ್ಲೆ ಮಾಡಲಾಯಿತು.
ರೂಪೇಶ್ ಶೆಟ್ಟಿ ಕಣ್ಣೀರು..
ಹೌದು, ಎಲಿಮಿನೇಶನ್ ಡ್ರಾಮಾದಲ್ಲಿ ಆರ್ಯವರ್ಧನ್ ಬ್ಯಾಡ್ ಲಕ್ ಎಂದು ಸುದೀಪ್ ಘೋಷಿಸುತ್ತಿದ್ದಂತೆ ರೂಪೇಶ್ ಶೆಟ್ಟಿ ಮತ್ತೆ ಕಣ್ಣೀರು ಹಾಕಿದರು. ಕಳೆದ ವಾರ ಆಪ್ತ ಸ್ನೇಹಿತೆ ಸಾನ್ಯಾ ಅಯ್ಯರ್ ಮನೆಯಿಂದ ಹೊರಬಿದ್ದ ಆಘಾತದಿಂದ ಚೇತರಿಸಿಕೊಂಡಿದ್ದ ರೂಪೇಶ್, ಅಪ್ಪಾಜಿ ಎಂದು ಕರೆಯುತ್ತಿದ್ದ ಆರ್ಯವರ್ಧನ್ ಸಹ ಹೋಗುತ್ತಿದ್ದಾರೆಂದು ಸಂಕಟ ತಡೆಯಲಾರದೇ ಅತ್ತುಬಿಟ್ಟರು.
ಬಳಿಕ, ಎಲಿಮಿನೇಶನ್ ಇಲ್ಲ ಎಂದು ಘೋಷಣೆಯಾಗುತ್ತಿದ್ದಂತೆ ನಿಟ್ಟುಸಿರುಬಿಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.