ಶನಿವಾರ, ಸೆಪ್ಟೆಂಬರ್ 18, 2021
24 °C

Bigg Boss 8: ಎಲಿಮಿನೇಶನ್‌ ಟ್ವಿಸ್ಟ್- ಸುದೀಪ್ ಮಾತು ಕೇಳಿ ದಂಗಾದ ಸ್ಪರ್ಧಿಗಳು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್ 4ನೇ ಎಲಿಮಿನೇಶನ್‌ನಲ್ಲಿ ಬಿಗ್ ಟ್ವಿಸ್ಟ್ ನೀಡಲಾಗಿದೆ. ವಾರಾಂತ್ಯದಲ್ಲಿ ಯಾರನ್ನೂ ಎಲಿಮಿನೇಟ್ ಮಾಡದೆ ವಾರದ ಯಾವುದೋ ಒಂದು ದಿನ ನಾಮಿನೇಟ್ ಆಗಿರುವ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗುತ್ತಾರೆ ಎಂದು ತಿಳಿಸಲಾಗಿದೆ.

ಕಾದು ಕುಳಿತಿದ್ದವರಿಗೆ ಸಿಕ್ಕಿದ್ದು ಟ್ವಿಸ್ಟ್: ಹೌದು, ವಾರಾಂತ್ಯದ ಎರಡೂ ಸಂಚಿಕೆಗಳಲ್ಲಿ ಯಾರು ಸೇಫ್ ಆಗುತ್ತಾರೆ ಮತ್ತು ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ಕುಳಿತಿದ್ದ ಮನೆಯ ಸದಸ್ಯರಿಗೆ ನಿರೂಪಕ ಕಿಚ್ಚ ಸುದೀಪ್, ಬಿಗ್ ಟ್ವಿಸ್ಟ್‌ ಕೊಟ್ಟಿದ್ದಾರೆ. ಭಾನುವಾರ ಒಬ್ಬರು ಮನೆಯಿಂದ ಹೊರಹೋಗುತ್ತಿಲ್ಲ. ಬದಲಾಗಿ, ಈ ವಾರದಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಅಂದರೆ, ಮುಂದಿನ ಶನಿವಾರ ನಾನು ಇಲ್ಲಿಗೆ ಬರುವ ಹೊತ್ತಿಗೆ ಒಬ್ಬ ಸ್ಪರ್ಧಿ ಮನೆಯಲ್ಲಿ ಇರುವುದಿಲ್ಲ. ಯಾರು ಹೋಗ್ತಾರೆ? ಯಾವಾಗ ಹೋಗ್ತಾರೆ? ಎಂಬುದನ್ನು ಕಾದು ನೋಡಿ. ಆ ಸಮಯ ಯಾವಾಗ ಬೇಕಾದರೂ ಬರಬಹುದು. ಆ ಕಂಟೆಸ್ಟೆಂಟ್ ಕೌಂಟ್‌ಡೌನ್ ಈಗ ಶುರುವಾಯಿತು ಎಂದು ಹೇಳುವ ಮೂಲಕ ಮನೆಯ ಸದಸ್ಯರಲ್ಲಿ ಕುತೂಹಲ ಹೆಚ್ಚು ಮಾಡಿದ್ದಾರೆ.

ಇವಾಗಿನಿಂದ ಪ್ರತೀ ಕ್ಷಣ ನಿಮ್ಮದಾಗಿಸಿಕೊಳ್ಳಿ. ನಿಮ್ಮಲ್ಲಿ ಹೊರಹೋಗುವ ಒಬ್ಬರಿಗೆ ವೇದಿಕೆ ಮೇಲೆ ನಾನು ಸಿಗುವುದಿಲ್ಲ ಎಂಬ ಬೇಸರವಿದೆ ಎಂದು ಹೇಳಿದ್ದಾರೆ.

ಮನೆಯಲ್ಲೀಗ ಒಂಬತ್ತು ಸದಸ್ಯರಿದ್ದು, ಇಂದಿನಿಂದ 14ನೇ ದಿನ ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆಯಲಿದೆ ಎಂದು ತಿಳಿಸಿದ ಸುದೀಪ್ ಅವರು, ಪ್ರಶಾಂತ್ ಸಂಬರಗಿ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು.

ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ ಮತ್ತು ಶಮಂತ್ ನಾಮಿನೇಟ್ ಅಗಿದ್ದು, ಈ ಐವರಿಗೆ ಕಿಚ್ಚನ ಮಾತು ಕೇಳಿ ಢವಢವ ಶುರುವಾಗಿದೆ.

ಯಾರಿಗೂ ಗೊತ್ತಿಲ್ಲದಂತೆ ಎತ್ತಾಕ್ಕೊಂಡು ಹೋಗ್ತರೆ: ಸುದೀಪ್ ಮಾತು ಕೇಳಿದ ಬಳಿಕ ಎಲಿಮಿನೇಶನ್ ಬಳಿಕ ಮನೆಯ ಸದಸ್ಯರು ಗಂಭೀರ ಚರ್ಚೆ ನಡೆಸಿದರು. ಇನ್ನುಮುಂದೆ ಹೀಗೆ. ಯಾರು ಯಾವಾಗ ಬೇಕಿದ್ದರೂ ಹೋಗಬಹುದು. ಕಳೆದ ಬಾರಿ ಹರೀಶ್ ರಾಜ್ ಅವರನ್ನು ಕ್ರೇನ್‌ನಲ್ಲಿ ಎತ್ತಿಕೊಂಡು ಹೋಗಿದ್ದರು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದು ಚಕ್ರವರ್ತಿ ಹೇಳಿದರು. ಎಲ್ಲರೂ ಒಟ್ಟಾಗಿರಿ ಎಂದು ಶುಭಾ ಪೂಂಜಾ ಸಲಹೆ ನೀಡಿದರು.

ಈ ಮಧ್ಯೆ, ಬೇಕಂತಲೇ ಬಚ್ಚಿಟ್ಟುಕೊಂಡು ಮನೆಯ ಸದಸ್ಯರಿಗೆ ಪ್ರ್ಯಾಂಕ್ ಮಾಡುವ ಉಪಾಯವನ್ನು ಶುಭಾ ಪೂಂಜಾ ಮತ್ತು ಶಮಂತ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು