ಬಿಗ್ಬಾಸ್ 12ನೇ ಆವೃತ್ತಿಯಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಾಳು ಅವರ ಆಯ್ಕೆಯಂತೆ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಕ್ಷಿತಾ, ರಾಶಿಕಾ ಹಾಗೂ ಕಾಕ್ರೋಚ್ ಸುಧಿ ನಾಮಿನೇಟ್ ಆಗಿದ್ದಾರೆ.
.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು.BBK12 |ಮೈಕ್ ಕಳಚಿಟ್ಟು ಜಾಹ್ನವಿ–ಅಶ್ವಿನಿ ರಹಸ್ಯ ಮಾತುಕತೆ: ಅಸಲಿ ಸತ್ಯ ಬಹಿರಂಗ.
ಗಿಲ್ಲಿ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ರಿಷಾ ಈ ವಾರ ನಾಮಿನೇಟ್ ಆಗಿದ್ದಾರೆ. ಬಳಿಕ ಬಿಗ್ಬಾಸ್ ಒಬ್ಬ ಸ್ಪರ್ಧಿಯನ್ನು ನಾಮಿನೇಷನ್ನಿಂದ ಸೇಫ್ ಮಾಡಲು ಹೇಳಿದ್ದರು. ಹೀಗಾಗಿ ಅಶ್ವಿನಿ ತಂಡದವರು ಮೊದಲು ಸುಧಿ ಅವರನ್ನು ಸೇಫ್ ಮಾಡಿ ರಘು ಅವರನ್ನು ನಾಮಿನೇಟ್ ಮಾಡಿದರು. ಬಳಿಕ ಸೇಫ್ ತಂಡಕ್ಕೆ ಬಂದಿದ್ದ ಕಾಕ್ರೋಚ್ ಸುಧಿ ಅವರನ್ನು ಕ್ಯಾಪ್ಟನ್ ಮಾಳು ನಾಮಿನೇಟ್ ಮಾಡಿದರು. ಉಳಿದಂತೆ ಧನುಷ್, ಕಾವ್ಯ, ಗಿಲ್ಲಿ, ಸ್ಪಂದನಾ, ಅಭಿಷೇಕ್, ಮಾಳು ಈ ವಾರದ ಎಲಿಮಿನೇಷನ್ನಿಂದ ಪಾರಾಗಿದ್ದಾರೆ.

ಭಾನುವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಕ್ಷಿತಾ, ರಿಷಾ, ರಘು, ರಾಶಿಕಾ ಹಾಗೂ ಕಾಕ್ರೋಚ್ ಸುಧಿ ಈ 8 ಸ್ಪರ್ಧಿಗಳಲ್ಲಿ ಒಬ್ಬರು ಬಿಗ್ಬಾಸ್ ಮನೆಯಿಂದ ಆಚೆ ಹೋಗುವುದು ಖಚಿತ. ಅದು ಯಾರೆಂದು ಕಿಚ್ಚ ಸುದೀಪ್ ಅವರು ವಾರದ ಕೊನೆಯ ಸಂಚಿಕೆಯಲ್ಲಿ ಹೇಳಲಿದ್ದಾರೆ. ಈ ವಾರ ಬಲಶಾಲಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಯಾವ ಸ್ಪರ್ಧಿ ಈ ವಾರ ಆಚೆ ಹೋಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.