ಜಾಹ್ನವಿ ಹಾಗೂ ಅಶ್ವಿನಿ ಗೌಡ ಬಿಗ್ಬಾಸ್ ಮನೆಯ ಮೂಲ ನಿಯಮ ಉಲ್ಲಂಘಿಸಿದ್ದಾರೆ. ಬಿಗ್ಬಾಸ್ ನೀಡುವ ಮೈಕ್ ಅನ್ನು ಕಳಚಿಟ್ಟು ಜಾಹ್ನವಿ ಹಾಗೂ ಅಶ್ವಿನಿ ಗೌಡ ಅಲಂಕಾರದ ಕೊಠಡಿಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಖುದ್ದು ಅಶ್ವಿನಿ ಗೌಡ ಅವರೇ ಕಳೆದ ಸಂಚಿಕೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಬಿಗ್ಬಾಸ್ ಮನೆ ಮಂದಿಗೆ ಟಾಸ್ಕ್ ಒಂದನ್ನು ಕೊಟ್ಟಿದ್ದರು. ತಮಗೆ ವಿಷಕಾರಿ ಎನಿಸುವ ಇಬ್ಬರು ಸ್ಪರ್ಧಿಗಳಿಗೆ ಪ್ರತಿಯೊಬ್ಬರೂ ಮೆಣಸಿನಕಾಯಿ ತಿನ್ನಿಸಬೇಕು ಎಂದಿದ್ದರು ಬಿಗ್ಬಾಸ್. ಆಗ ಅಶ್ವಿನಿ ಗೌಡ ಅವರು ಜಾಹ್ನವಿ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರಿಗೆ ಮೆಣಸಿನಕಾಯಿ ಕೊಟ್ಟು ‘ಮಾತು ಬಿಟ್ಟಿದ್ದೇವೆ ಅನ್ನೋ ರೀತಿಯಲ್ಲಿ ನಾಟಕ ಮಾಡೋಣ ಅಂತ ರಹಸ್ಯವಾಗಿ ಮಾತನಾಡಿದ್ದೇವೆ’ ಎಂದು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ.
.ಬಿಗ್ಬಾಸ್: ಅಶ್ವಿನಿ ಮೇಲೆ ಕಪ್ಪು ನೀರು ಸುರಿದು ಮಾಳು ತಪ್ಪು ಮಾಡಿದ್ರಾ..? .ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ.
ಅಶ್ವಿನಿ ಗೌಡ ಹೇಳಿದ್ದೇನು?

‘ ಒಂದು ದಿನ ನಾನು ಹಾಗೂ ಜಾಹ್ನವಿ ಅಲಂಕಾರದ ಕೊಠಡಿಯಲ್ಲಿ ಮಾತಾಡಿಕೊಳ್ತೀವಿ. ಅದೂ ಮೈಕ್ಸ್ ಇಲ್ಲದೆ ಇಬ್ಬರೂ ಮಾತನಾಡಿದ್ದೇವೆ. ಜಾಹ್ನವಿ ಅವರೇ ಹೇಳುತ್ತಾರೆ ಪದೇ ಪದೇ ಎಲ್ಲರೂ ಹೇಳುತ್ತಿದ್ದಾರೆ ಅಂದಾಗ ದೂರ ಆಗಿದ್ದೀವಿ ಅಂತ ತೋರಿಸಿಕೊಳ್ಳುವಂತಹ ನಾಟಕ ಮಾಡೋಣ ಅಂತಾರೆ. ರಕ್ಷಿತಾ ವಿಚಾರ ಪ್ರಾರಂಭ ಆಗೋದು ಜಾಹ್ನವಿ ಅವರಿಂದ. ಗೆಜ್ಜೆಯನ್ನ ತಂದಿದ್ದು ಅವರೇ. ಐಡಿಯಾ ಕೊಟ್ಟಿದ್ದೂ ಅವರೇ. ಆನಂತರ ನಡೆದಿದ್ದಕ್ಕೆ ಇಬ್ಬರೂ ಕಾರಣ ಆಗ್ತೀವಿ. ಆದರೆ, ನಂತರ ಅವರು ಹೊರಗೆ ಹೋಗಿ ರಕ್ಷಿತಾನ ರಕ್ಷು ಅಂತ ಕರೆಯೋಕೆ ಶುರು ಮಾಡುತ್ತಾರೆ. ಅವತ್ತು ನಾವು ಅಲಂಕಾರದ ಕೊಠಡಿಯಲ್ಲಿ ಮಾತಾಡಿಕೊಂಡಿದ್ದನ್ನು ನಂಬಿಕೊಂಡಿದ್ದೇನೆ. ಆದರೆ ಇವರ ತಂತ್ರ ನನಗೆ ಅರ್ಥವಾಗಿಲ್ಲ. ಸ್ನೇಹಿತೆ ಅಂತ ನಾನು ಜಾಗ ಕೊಟ್ಟಿದ್ದೆ. ಅದಕ್ಕೆ ಇವರು ಅರ್ಹರೇ ಅಲ್ಲ’ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.

ಬಳಿಕ ಮಾತನಾಡಿದ ಜಾಹ್ನವಿ, ನನಗೆ ನಿಮ್ಮ ಸ್ನೇಹ ಬೇಡವೂ ಬೇಡ. ಜಗಳ ಮಾಡುವ ಹಾಗೆ ಮಾಡಿ, ಮನೆಯನ್ನ ನಂಬಿಸೋಣ ಅಂತ ಅಂದುಕೊಂಡಿದ್ದು ನಿಜ. ಆದರೆ ತಕ್ಷಣ ಮಾಡಿದರೆ ಅನುಮಾನ ಬರುತ್ತೆ ಅಂತ ಮಾಡಲಿಲ್ಲ. ಆದರೆ, ಚರ್ಚಾ ಸ್ಪರ್ಧೆಯಲ್ಲಿ ಸಹಜವಾಗಿ ಆಯ್ತು. ನಾನು ಅಳುತ್ತಾ ಮಲಗಿರುವಾಗ, ಜೊತೆಯಲ್ಲಿ ಇದ್ದವಳಿಗೇ ಚಪ್ಪಲಿ ಬಿಟ್ಟಿದ್ದಾರೆ ಅಂತ ತಿರುಗೇಟು ಕೊಟ್ಟಿದ್ದರು. ನಾನು ನಿಮ್ಮನ್ನ ತಿಳಿದವರು ಅಂದುಕೊಂಡಿದ್ದೀನಿ. ತಿರುಗೇಟು ಕೊಟ್ಟು ಸಿಲ್ಲಿ ಆಗಬೇಡಿ ಅಂತಲೇ ನಾನು ಅವರಿಗೆ ಹೇಳಿದ್ದೆ. ಆಮೇಲೆ ಅದನ್ನು ಅವರು ಅಲ್ಲಿಗೆ ನಿಲ್ಲಿಸಿದರು. ನಾನು ಈವರೆಗೂ ಯಾರಿಗೂ ಹತ್ತಿರವಾಗಿಲ್ಲ. ಮುಖವಾಡವೂ ಇಲ್ಲ. ಸ್ನೇಹಕ್ಕೆ 3 ವಾರ ಬೆಲೆ ಕೊಟ್ಟಿದ್ದು ಹೌದು. ಈಗ ನಮ್ಮ ಸ್ನೇಹ ಉಳಿದಿಲ್ಲ. ತಪ್ಪು ಕಂಡರೆ ನೇರವಾಗಿ ಹೇಳುತ್ತಿದ್ದೇನೆ ಎಂದರು.

ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡುತ್ತಾರಾ ಅಥವಾ ಬಿಗ್ಬಾಸ್ ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಶಿಕ್ಷೆ ಆಗುತ್ತಾ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.