ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಗಳ ಮೇಲೆ ಸಗಣಿ ನೀರು, ಕಸದ ರಾಶಿ, ಕಪ್ಪು ಬಣ್ಣದ ನೀರು ಹಾಕುವಂತೆ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು.

ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು ವಿರುದ್ಧ ಅಶ್ವಿನಿ ಹಾಗೂ ಜಾನ್ವಿ ಸಿಟ್ಟಾಗಿದ್ದಾರೆ.

‘ಅಶ್ವಿನಿ ಅವರ ಮನಸ್ಸಿನಲ್ಲಿ ಕಲ್ಮಷ ಜಾಸ್ತಿ ಇದೆ ಹಾಗಾಗಿ ಅವರಿಗೆ ಕಪ್ಪು ಬಣ್ಣದ ನೀರು ಸುರಿಯುತ್ತೇನೆ’ ಎಂದು ಮಾಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಅವರು, ರಕ್ಷಿತಾಳಿಗೆ ಕ್ಷಮೆ ಕೇಳಿದ್ದೀನಿ ಆದರೆ ಇನ್ನೂ ಸೋತಿಲ್ಲ ಎಂದಿದ್ದಾರೆ.
.ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್.
ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಮೇಲೆ ಸಗಣಿ ನೀರು, ರಾಶಿಕ ಮೇಲೆ ಕಸದ ರಾಶಿ, ಅಶ್ವಿನಿ ಅವರ ಮೇಲೆ ಕಪ್ಪು ಬಣ್ಣದ ಸುರಿದಿದ್ದಾರೆ.

ಕ್ಯಾಪ್ಟನ್ ಮಾಳು ಅವರು ರಾಶಿಕ ಮೇಲೆ ಕಸದ ರಾಶಿ ಹಾಕಿದ್ದಕ್ಕೆ ಬೇಸರಗೊಂಡಿದ್ದಾರೆ. ಇತ್ತ ಅಭಿಷೇಕ್ ಅವರು ಮಾಳು ಅವರಿಗೆ ಒಂದಿಷ್ಟು ದಿನ ನೀನು ಯಾರ ಹತ್ತಿರವೂ ಮಾತನಾಡಬೇಡ ಎಂದಿದ್ದಾರೆ.

ಇತ್ತ ರಾಶಿಕ, ‘ಎಲ್ಲರೂ ನನ್ನನೇ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ಸೂರಾಜ್ ಬಳಿ ಬೇಸರ ಹೊರ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.